ಕರಾವಳಿ

ಅಶ್ಲೀಲ ವಿಡಿಯೋ ಮಾಡಿಕೊಂಡು ಯುವತಿಗೆ ಬ್ಲಾಕ್ ಮೇಲ್: ಕಾರ್ಕಳ ಪೊಲೀಸರಿಂದ ಯುವಕನ ಬಂಧನ..!

Pinterest LinkedIn Tumblr

ಉಡುಪಿ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ಪತ್ತೊಂಜಿಕಟ್ಟೆ ಮೂರು ಸೆನ್ಸ್ ಆಶ್ರಯ ಕಾಲನಿ ನಿವಾಸಿ ಸಾದಿಕ್ ಎಂಬಾತನನ್ನು ಉಡುಪಿ ಜಿಲ್ಲೆಯ ಕಾರ್ಕಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

(ಸಾಂದರ್ಭಿಕ ಚಿತ್ರ)

ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ವಿಚಾರಕ್ಕೆ ಸಂಬಂಧಿಸಿ, ಈತನ ವಿರುದ್ದ ದೂರು ಬಂದ ಹಿನ್ನಲೆಯಲ್ಲಿ ಬಂಧನವಾಗಿದೆ.

ಈತ ಯುವತಿಯನ್ನು ಪುಸಲಾಯಿಸಿ ಪ್ರೀತಿಯ ಖೆಡ್ಡಾಕ್ಕೆ ಬೀಳಿಸಿ, ಅಶ್ಲೀಲ ಪೋಟೋ, ವೀಡೀಯೋ ಮಾಡಿಟ್ಟುಕೊಂಡು ಯುವತಿಯನ್ನು ಬೆದರಿಸಿ ಬ್ಲಾಕ್ ಮೇಲ್ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಘಟನೆ ಸಂಬಂದ ಈತನ ವಿರುದ್ದ ಅತ್ಯಚಾರ ಪ್ರಕರಣ ದಾಖಲಿಸಲಾಗಿದೆ.

 

Comments are closed.