ಕರಾವಳಿ

ಪಣಂಬೂರು ಬಳಿ ದೋಣಿ ದುರಂತ; ನಾಲ್ವರು ಮೀನುಗಾರರ ರಕ್ಷಣೆ , ಓರ್ವ ನಾಪತ್ತೆ

Pinterest LinkedIn Tumblr

ಮಂಗಳೂರು: ಪಣಂಬೂರು ಸಮುದ್ರ ತೀರದಲ್ಲಿ ದೋಣಿಯೊಂದು ಅವಘಡಕ್ಕೊಳಗಾಗಿ ಮೀನುಗಾರರು ನೀರುಪಾಲಾದ ಘಟನೆ ನಡೆದಿದೆ.

ಅಝರ್ ಎಂಬವರ ಮಾಲಕತ್ವದ ಗಿಲ್ ನೆಟ್ ಬೋಟ್ ಅವಘಡ ಸಂಭವಿಸಿ ಮೀನುಗಾರರು ನೀರುಪಾಲಾಗಿದ್ದರು.ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬ ನಾಲ್ವರು ಮೀನುಗಾರರನ್ನು ದಡದಲ್ಲಿದ್ದ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಈ ಪೈಕಿ ಶರೀಫ್ ಎನ್ನುವ ಮೀನುಗಾರ ನಾಪತ್ತೆಯಾಗಿದ್ದು ಹುಡುಕಾಟ ನಡೆಯುತ್ತಿದೆ. ಅವಘಡಕ್ಕೊಳಗಾದ ದೋಣಿಯನ್ನು ದಡಕ್ಕೆ ತರಲಾಗಿದೆ.

 

Comments are closed.