
ಮಂಗಳೂರು : ಕೋವಿಡ್ ನಿಯಂತ್ರಣ ಮಾಡಲು ಸಾರ್ವಜನಿಕರು ಸ್ವಯಂ ಪ್ರೇರಿ ತರಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಅವರು ಪಣಂಬೂರು ಕೆಐಒಸಿಎಲ್ ಟೌನ್ ಶಿಫ್ ಆವರಣದಲ್ಲಿಂದು ಕೋವಿಡ್ ನಿಯಂತ್ರಣ ಲಸಿಕೆಯ ವಿತರಣಾ ಕಾರ್ಯ ಕ್ರಮ ವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮ ಕ್ಕೆ ಸಾರ್ವಜನಿಕ ರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಎರಡು ಡೋಸ್ ಲಸಿಕೆ ಪಡೆದವರ ಸಂಖ್ಯೆ ಹೆಚ್ಚು ತ್ತಿರುವಂತೆ ಕೋವಿಡ್ ಸೋಂಕಿತರ ಪ್ರಕರಣಗಳು ಕಡಿಮೆ ಯಾಗುತ್ತಿದೆ. ಜಿಲ್ಲೆಯಲ್ಲಿ 30 ರಿಂದ 40 ಸಾವಿರ ಡೋಸ್ ಲಸಿಕೆ ವಿತರಣೆ ಯಾಗು ತ್ತಿದೆ. ಪ್ರತಿದಿನ ಸುಮಾರು 12ಸಾವಿರ ಮಂದಿಯ ತಪಾಸಣೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದ್ದಾರೆ.
ವಾರಂತ್ಯದ ಕರ್ಫ್ಯೂ ಹೇರುವುದರ ಮೂಲಕ ಕೋವಿಡ್ ಸೋಂಕಿನ ಸರಪಣಿ ವಿಸ್ತರಣೆ ಯಾಗುವು ದನ್ನು ತಡೆಯಲು ಸಾಧ್ಯವಾಗಿದೆ.ಕೇರಳದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಶೇ.16 ಇದೆ.ಆದರೆ ಗಡಿಭಾಗದಲ್ಲಿ ರುವ ದಕ್ಷಿಣ ಕನ್ನಡದಲ್ಲಿ ಪಾಸಿಟಿವಿಟಿ ಪ್ರಮಾಣ ಶೇ 2 ರಲ್ಲಿರುವುದು ಈ ಜಿಲ್ಲೆಯವರ ಪಾಲಿಗೆ ಅದೃಷ್ಟ ವೆನ್ನಬಹುದು.
ಕೋವಿಡ್ ಸೋಂಕು ಹರಡದಂತೆ ತಡೆಯಲು ಸಾರ್ವಜನಿಕ ರು ಸ್ವಯಂ ಪ್ರೇರಿತರಾಗಿ ಕೋವಿಡ್ ಸಂಬಂಧಿ ಸಿದ ಸೂಚನೆಗಳನ್ನು ಪಾಲಿಸಬೇಕು.ಸಾಕಷ್ಟು ಗುಂಪು ಸೇರುವುದನ್ನು ತಡೆಯಬೇಕು. ಮಾಸ್ಕ್ ಧರಿಸಬೇಕು, ದೈಹಿಕ ಅಂತರವನ್ನು ಕಾಪಾಡಬೇಕು.ಅನಗತ್ಯ ಓಡಾಟಕ್ಕೆ ನಿಯಂತ್ರಣ ಹಾಕಬೇಕಾಗಿದೆ ಎಂದರು.
ಕೆಐಒಸಿಎಲ್ ನ ನೌಕರರಲ್ಲಿ ಒಟ್ಟು 2673 ಮಂದಿಗೆ ಎರಡೂ ಡೋಸ್ ಲಸಿಕೆ ನೀಡುವ ಮೂಲಕ ಶೇ.98ಸಾಧನೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾ ಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸಮಾರಂಭದಲ್ಲಿ ಕೆಐಒಸಿಎಲ್ ಲಿ. ಪ ಣಂಬೂರು ಘಟಕದ ಮಹಾಪ್ರಬಂಧಕರಾದ ರಾಮಕೃಷ್ಣ ರಾವ್,ದಾಸಪ್ಪ ಶೆಟ್ಟಿ,ಉಪ ಮುಖ್ಯ ಆರೋಗ್ಯಾಧಿಕಾರಿ ಡಾ.ಎಂ.ಎನ್. ಮಂಜುನಾಥ್ ,ಹಿರಿಯ ಪ್ರಬಂಧಕರಾದ ಮುರುಗೇಶ್ ಮೊದಲಾದ ವರು ಉಪಸ್ಥಿತರಿದ್ದರು.
Comments are closed.