ಕುಂದಾಪುರ: ಕಳೆದ ಆರೇಳು ದಶಕಗಳಿಂದ ಬೈಂದೂರು ವಿಧಾನಸಭಾ ಕ್ಷೇತ್ರದ ಅಂಪಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಡುಬಿಯರ್ ಜಡ್ಡು ಎಂಬಲ್ಲಿ ಪರಿಶಿಷ್ಟ ಜಾತಿಯ ಆರು ಕುಟುಂಬಗಳು ವಾಸವಾಗಿದ್ದು ಅವರಿಗೆ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಬಳಿಕ ಮಾತನಾಡಿ, ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗ ಎಂಬ ಕಾರಣಕ್ಕೆ ಅವರಿಗೆ ಯಾವುದೇ ಹಕ್ಕು ಪತ್ರ ಇರಲಿಲ್ಲ. ಅವರಿಗೆ ಹಕ್ಕುಪತ್ರ ಕಲ್ಪಿಸುವ ಕುರಿತು ಅರಣ್ಯ ಸಚಿವರೊಂದಿಗೆ ಮಾತುಕತೆ ಮಾಡುವುದಾಗಿ ತಿಳಿಸಿದರು. ಒಂದು ವೇಳೆ ಕಾನೂನು ತೊಡುಕು ಉಂಟಾದರೆ, ಬೇರೆ ಜಾಗವನ್ನು ನೀಡುವ ಸಂಪೂರ್ಣ ಭರವಸೆ ನೀಡಿದರು.
ಬೈಂದೂರು ಶಾಸಕರ ಭೇಟಿ ವೇಳೆ ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು, ತಹಶೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ನಿರೀಕ್ಷಕ ರಾಘವೇಂದ್ರ, ಗ್ರಾಮ ಲೆಕ್ಕಾಧಿಕಾರಿ ಪರಸಪ್ಪ , ಪಂಚಾಯತ್ ಅಧ್ಯಕ್ಷೆ ಭಾರತೀ ಶೇಟ್, ಪಂಚಾಯತ್ ಸದಸ್ಯರುಗಳಾದ ಅಶೋಕ್ ನಾಯ್ಕ್, ನವೀನ್ ಶೆಟ್ಟಿ, ಗೋಪಾಲಕೃಷ್ಣ ಕಿಣಿ, ನಂದಿನಿ, ಅರುಣ್ ಶೆಟ್ಟಿ ಅಂಪಾರು ಮತ್ತಿತರಿದ್ದರು.
Comments are closed.