ಸಂಘಟನಾತ್ಮಕ ಕರಾವಳಿ ಜಿಲ್ಲೆಗೆ ಪ್ರಮುಖ ಖಾತೆ ಬಿಜೆಪಿ ಹರ್ಷ : ಸುದರ್ಶನ ಎಂ

ಮಂಗಳೂರು : ಬಿಜೆಪಿ ಕಾರ್ಯಕರ್ತರ ಪಾರ್ಟಿ. ಪ್ರಾಮಾಣಿಕತೆ, ನಿಷ್ಟೆಯಿಂದ ಕಾರ್ಯ ಮಾಡುವವರನ್ನು ಯಾವತ್ತೂ ಬಿಜೆಪಿ ಕೈ ಬಿಡುವುದಿಲ್ಲ. ರಾಜ್ಯ ಸರ್ಕಾರಕ್ಕೆ 12 ಶಾಸಕರುಗಳನ್ನು ನೀಡಿದ ಕರಾವಳಿ ಜಿಲ್ಲೆಗೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರು ಸೂಕ್ತ ಸ್ಥಾನಮಾನ ನೀಡಿದ್ದು ದಕ್ಷಿಣ ಕನ್ನಡ ಬಿಜೆಪಿ ಕಾರ್ಯಕರ್ತರಿಗೆ ಹರ್ಷ ತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಸುದರ್ಶನ ಎಂ. ತಿಳಿಸಿದ್ದಾರೆ.
ಶ್ರೀ ಎಸ್. ಅಂಗಾರರವರಿಗೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಖಾತೆ ಕೋಟಾ ಶ್ರೀ ಶ್ರೀನಿವಾಸ ಪೂಜಾರಿಯವರಿಗೆ ಸಮಾಜಕಲ್ಯಾಣ ಮತ್ತು ಹಿಂದುಳಿದ ವರ್ಗ ಅಭಿವೃದ್ದಿ ಖಾತೆ
ಶ್ರೀ ವಿ.ಸುನಿಲ್ ಕುಮಾರ್ ರವರಿಗೆ ಇಂಧನ ಮತ್ತು ಕನ್ನಡ ಸಂಸ್ಕೃತಿ ಖಾತೆ ಸಚಿವರುಗಳು ತಮಗೆ ನೀಡಿರುವ ಖಾತೆಗೆ ನ್ಯಾಯ ಕೊಟ್ಟು ಜನರ ಆಶೋತ್ತರಗಳನ್ನು ಈಡೇರಿಸುತ್ತಾರೆ ಹಾಗೂ ಜಿಲ್ಲೆಯ ಘನತೆಯನ್ನು ಹೆಚ್ಚಿಸುತ್ತಾರೆ ಎಂಬ ವಿಶ್ವಾಸ ಇದೆ. ನೂತನ ಸಚಿವರುಗಳಿಗೆ ಶುಭ ಹಾರೈಸುತ್ತೇನೆ ಎಂದವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಮುಖ ಖಾತೆಗಳನ್ನು ನೀಡಿರುವ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ, ಬಿಜೆಪಿ ರಾಜ್ಯಾಧ್ಯಕ್ಷರು ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲ್ ರವರಿಗೆ, ಪಕ್ಷದ ರಾಜ್ಯ ಹಾಗೂ ಕೇಂದ್ರದ ವರಿಷ್ಠರಿಗೆ ಜಿಲ್ಲೆಯ ವತಿಯಿಂದ ವಂದನೆಗಳನ್ನು ಅರ್ಪಿಸುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷರು ಸುದರ್ಶನ ಎಂ ಹೇಳಿದ್ದಾರೆ.
Comments are closed.