ಮನೋರಂಜನೆ

ಪತಿಯ ಬಂಧನದ ಬಳಿಕ ಬಹಿರಂಗವಾಗಿ ಹೇಳಿಕೆ ನೀಡಿದ ನಟಿ ಶಿಲ್ಪಾ ಶೆಟ್ಟಿ !

Pinterest LinkedIn Tumblr

ಅಶ್ಲೀಲ ಸಿನಿಮಾ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿರುವ ಉದ್ಯಮಿ ರಾಜ್‌ ಕುಂದ್ರಾ ಸದ್ಯ ನ್ಯಾಯಾಂಗ ಬಂಧನಲ್ಲಿದ್ದಾರೆ. ಇದೀಗ ಅವರ ಪತ್ನಿ, ನಟಿ ಶಿಲ್ಪಾ ಶೆಟ್ಟಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಶಿಲ್ಪಾ, ‘ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸಿ. ನನ್ನ ಪರವಾಗಿ ಸುಳ್ಳು ಹೇಳಿಕೆಗಳನ್ನು ನೀಡಬೇಡಿ’ ಎಂದು ಹೇಳಿಕೊಂಡಿದ್ದಾರೆ. ಪೂರ್ತಿ ಪೋಸ್ಟ್‌ನಲ್ಲಿ ಏನಿದೆ?

ನನ್ನ ಕುಟುಂಬವನ್ನೂ ಟ್ರೋಲ್ ಮಾಡಿದ್ದಾರೆ
‘ಹೌದು, ಕಳೆದ ಕೆಲವು ದಿನಗಳು ನನಗೆ ಸವಾಲುಗಳು ನನಗೆ ಎದುರಾಗಿವೆ. ಸಾಕಷ್ಟು ವದಂತಿಗಳು ಮತ್ತು ಆರೋಪಗಳು ಬಂದಿವೆ. ಮಾಧ್ಯಮಗಳು ಮತ್ತು ಕೆಲ ಹಿತೈಷಿಗಳು ಅನಗತ್ಯ ಮಾತುಗಳನ್ನಾಡಿದರು. ನನಗೆ ಮಾತ್ರವಲ್ಲ, ನನ್ನ ಕುಟುಂಬವನ್ನೂ ಟ್ರೋಲ್ ಮಾಡಿದ್ದಾರೆ, ಪ್ರಶ್ನೆ ಮಾಡಿದ್ದಾರೆ. ನಾನಿನ್ನೂ ನನ್ನ ನಿಲುವನ್ನು ತಿಳಿಸಿಲ್ಲ ಮತ್ತು ಈ ಪ್ರಕರಣವು ಪೂರ್ವಾಗ್ರಹವಾಗಿದೆ. ಆದ್ದರಿಂದ ದಯವಿಟ್ಟು ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸಿ. ನನ್ನ ಪರವಾಗಿ ಸುಳ್ಳು ಹೇಳಿಕೆಗಳನ್ನು ನೀಡಬೇಡಿ’ ಎಂದು ಶಿಲ್ಪಾ ಮನವಿ ಮಾಡಿಕೊಂಡಿದ್ದಾರೆ.

ನಮ್ಮ ಖಾಸಗಿತನಕ್ಕೆ ಗೌರವ ನೀಡಿ
‘ಓರ್ವ ಸೆಲೆಬ್ರಿಟಿಯಾಗಿ ‘ಎಂದಿಗೂ ದೂರಬೇಡಿ, ಎಂದಿಗೂ ವಿವರಿಸಬೇಡಿ’ ಎಂಬ ನನ್ನ ಫಿಲಾಸಫಿಯನ್ನು ಪುನರುಚ್ಚರಿಸುತ್ತೇನೆ. ಸದ್ಯ ತನಿಖೆ ಸಾಗುತ್ತಿದೆ. ಮುಂಬೈ ಪೊಲೀಸರು ಮತ್ತು ಭಾರತದ ಕಾನೂನಿನ ಮೇಲೆ ಪೂರ್ಣ ನಂಬಿಕೆ ಇದೆ. ಒಂದು ಕುಟುಂಬವಾಗಿ, ನಾವು ಲಭ್ಯವಿರುವ ಎಲ್ಲ ಕಾನೂನು ಪರಿಹಾರಗಳ ಮೇಲೆ ನಂಬಿಕೆ ಇಟ್ಟಿದ್ದೇವೆ. ಆದರೆ, ಅಲ್ಲಿವರೆಗೂ ನಿಮ್ಮಲ್ಲಿ ನನ್ನ ಕಳಕಳಿಯ ಮನವಿ ಒಂದೇ, ಒಬ್ಬ ತಾಯಿಯಾಗಿ ಕೇಳಿಕೊಳ್ಳುತ್ತಿದ್ದೇನೆ. ನನ್ನ ಮಕ್ಕಳ ಸಲುವಾಗಿಯಾದರೂ ನಮ್ಮ ಖಾಸಗಿತನಕ್ಕೆ ಗೌರವ ನೀಡಿ. ಅರೆಬೆಂದ ಮಾಹಿತಿಗಳಿಗೆ ಕಾಮೆಂಟ್ ಮಾಡುವುದನ್ನು ನಿಲ್ಲಿಸಿ’ ಎಂದು ಅವರು ಮನವಿ ಮಾಡಿದ್ದಾರೆ.

‘ನಾನು ಹೆಮ್ಮೆಯ ಕಾನೂನು ಪಾಲಿಸುವ ಭಾರತೀಯ ಪ್ರಜೆ ಮತ್ತು ಕಳೆದ 29 ವರ್ಷಗಳಿಂದ ಕಠಿಣ ಪರಿಶ್ರಮ ಹೊಂದಿರುವ ವೃತ್ತಿಪರವುಳ್ಳ ವ್ಯಕ್ತಿ. ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಮತ್ತು ನಾನು ಯಾರನ್ನೂ ನಿರಾಸೆಗೊಳಿಸಲಿಲ್ಲ. ಆದ್ದರಿಂದ, ಮುಖ್ಯವಾಗಿ, ಈ ಸಮಯದಲ್ಲಿ ನನ್ನ ಕುಟುಂಬ ಮತ್ತು ನನ್ನ ಖಾಸಗಿತನದ ಹಕ್ಕನ್ನು ಗೌರವಿಸುವಂತೆ ನಾನು ವಿನಂತಿಸುತ್ತೇನೆ. ನಾವು ಮಾಧ್ಯಮ ವಿಚಾರಣೆಗೆ ಅರ್ಹರಲ್ಲ. ದಯವಿಟ್ಟು ಕಾನೂನಿಗೆ ತನ್ನ ಕಾರ್ಯವನ್ನು ಮಾಡಲು ಬಿಡಿ. ಸತ್ಯಮೇವ ಜಯತೆ.. ಧನಾತ್ಮಕತೆ ಮತ್ತು ಕೃತಜ್ಞತೆಯೊಂದಿಗೆ ನಿಮ್ಮ ಶಿಲ್ಪಾ ಶೆಟ್ಟಿ ಕುಂದ್ರಾ’ ಎಂದು ಅವರು ಬರೆದುಕೊಂಡಿದ್ದಾರೆ.

Comments are closed.