ಕುಂದಾಪುರ: ಕುಂದಾಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ ಮಹಿಳೆಯೋರ್ವರ ಚಿನ್ನದ ಸರ ಕಳವಾಗಿರುವ ಬಗ್ಗೆ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮಹಿಳೆ ದೂರು ನೀಡಿದ್ದಾರೆನ್ನುವ ಮಾಹಿತಿ ಲಭಿಸಿದೆ.

ಕುಂದಾಪುರ ಸರಕಾರಿ ಆಸ್ಪತ್ರೆಗೆ ಉಸಿರಾಟದ ಸಮಸ್ಯೆ ಹಿನ್ನೆಲೆ ದಾಖಲಾಗಿದ್ದರು. ಅವರನ್ನು ಆಸ್ಪತ್ರೆಯ ಸಾರ್ರಿ ವಾರ್ಡಿಗೆ ದಾಖಲಿಸಲಾಗಿದ್ದು ಎರಡು ದಿನದ ನಂತರ ಆಕೆಯ ಮಗ ನೋಡಿದಾಗ ಕುತ್ತಿಗೆಯಲ್ಲಿದ್ದ ಸರ ಕಾಣೆಯಾಗಿದೆ ಈ ಬಗ್ಗೆ ಆಸ್ಪತ್ರೆಯ ಆಡಳಿತ ಅಧಿಕಾರಿ ವೈದ್ಯರಾದ ಡಾಕ್ಟರ್ ರಾಬರ್ಟ್ ರೆಬೆಲ್ಲೋ ಬಳಿ ದೂರು ನೀಡಿದ್ದು ಅವರು ಪೊಲೀಸ್ ಕಂಪ್ಲೇಂಟ್ ನೀಡಲು ಸಲಹೆ ನೀಡಿದ್ದಾರೆ. ಇದುವರೆಗೂ ದೂರು ದಾಖಲಾಗಿರುವ ಮಾಹಿತಿ ಲಭಿಸಿಲ್ಲ. ಪೊಲೀಸ್ ಠಾಣೆಗೆ ದೂರುನೀಡಿದಲ್ಲಿ ಆಸ್ಪತ್ರೆಯ ಸಿಸಿಟಿವಿ ಫುಟೇಜ್ ಸಹಿತ ಅವರ ತನಿಖೆಗೆ ಬೇಕಾದ ಎಲ್ಲಾ ಸಹಕಾರ ನೀಡುವುದಾಗಿ ಡಾಕ್ಟರ್ ರಾಬರ್ಟ್ ರೆಬೆಲ್ಲೋ ತಿಳಿಸಿದ್ದಾರೆ. ಅಲ್ಲದೆ ಆಸ್ಪತ್ರೆಗೆ ಬರುವಾಗ ಅಗತ್ಯಕ್ಕಿಂತ ಜಾಸ್ಥಿ ನಗದು ಮತ್ತು ಮೌಲ್ಯಯುತ ಚಿನ್ನಾಭರಣ ತರುವುದು ಸೂಕ್ತವಲ್ಲ ಎಂದು ಅವರು ರೋಗಿಗಳು ಮತ್ತು ಅವರ ಸಂಬಂಧಿಕರಲ್ಲಿ ಮನವಿ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಪರ್ಸ್ ಕಳವಾದ ಬಗ್ಗೆ ಮಾಹಿತಿಯಿದೆ. ಎರಡೂ ಘಟನೆ ಬಗ್ಗೆ ಈವರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎನ್ನಲಾಗಿದೆ.
Comments are closed.