ಕರಾವಳಿ

ಖಾಸಗಿ ಬಸ್ ಗಳಲ್ಲಿ ಹೆಚ್ಚಿನ ದರ ಪಡೆದರೆ ದೂರು ನೀಡಿ: ಬಸ್ಸುಗಳ ಮೇಲೆ ನಿರ್ಧಾಕ್ಷೀಣ್ಯ ಕ್ರಮದ ಎಚ್ಚರಿಕೆ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು, ಜುಲೈ.13, ಮೋಟಾರು ವಾಹನ ಕಾಯ್ದೆ ಹಾಗೂ ರಾಜ್ಯ ಸರ್ಕಾರದ ಅಧಿಸೂಚನೆಯ ಪ್ರಕಾರ ನಗರ ಮತ್ತು ಗ್ರಾಮಾಂತರ ಪ್ರಯಾಣ ದರವನ್ನು ನಿಗದಿಪಡಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ. ಕೋವಿಡ್-19 ಅವಧಿಯಲ್ಲಿ ದಕ್ಷಿಣ ಕನ್ನಡ ಸಾರಿಗೆ ಪ್ರಾಧಿಕಾರವು ನಗರ ಮತ್ತು ಗ್ರಾಮಾಂತರ ಪ್ರಯಾಣ ದರ ಏರಿಕೆ ಮಾಡಿರುವುದಿಲ್ಲ.

ಖಾಸಗಿ ಬಸ್ ಮಾಲೀಕರು ಹೆಚ್ಚುವರಿ ದರ ಪಡೆದಲ್ಲೀ, ಬಸ್ಸಿನ ನೋಂದಣಿ ಸಂಖ್ಯೆ ಹಾಗೂ ರೂಟ್ ಮಾಹಿತಿಯನ್ನು ಲಿಖಿತ ಪುರಾವೆಯೊಂದಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಕಚೇರಿಗೆ ಸಲ್ಲಿಸಬೇಕು. ಅಂತಹ ವಾಹನಗಳ ಮೇಲೆ ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.