ಕರಾವಳಿ

ಕಾಡುಪ್ರಾಣಿ ಬೇಟೆಗೆ ಬಂದವರನ್ನು ಬಂಧಿಸಿದ ಶಂಕರನಾರಾಯಣ ವಲಯ ಕಾಳಭೈರವ ರಾತ್ರಿ ಗಸ್ತು ತಂಡ

Pinterest LinkedIn Tumblr

ಕುಂದಾಪುರ: ಬಿಲ್ಲಾಡಿ ಬ್ಲಾಕ್ ಮೀಸಲು ಅರಣ್ಯಕ್ಕೆ ಬೇಟೆಗೆ ಬಂದವರ ವಾಹನ ಹಾಗೂ ವನ್ಯಜೀವಿಗಳ ಬೇಟೆಯಾಡಲು ಬಳಸುವ ಆಯುಧ ಹಾಗೂ ವಾಹನ ಸಹಿತ ಬಂದವರನ್ನು ಶಂಕರನಾರಾಯಣ ವಲಯ ಕಾಳಭೈರವ ರಾತ್ರಿ ಗಸ್ತು ತಂಡದವರು ಬಂಧಿಸಿದ್ದಾರೆ. 

ಶಿರಿಯಾರ ಮೆಟ್ಕಲಾಣೆ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಸಮಯ ರಿಡ್ಜ್ ಕಾರ್‌ನಲ್ಲಿ ವನ್ಯಜೀವಿಗಳ ಬೇಟೆ ಸಲುವಾಗು ಆಯುಧ ಹಿಡಿದು ಬಂದ ಬ್ರಹ್ಮಾವರ ನಾಲ್ಕೂರು ಮರಾಳಿ ಕಂಬಳಿಬೆಟ್ಟು ರಾಜೇಶ್ (30), ಕೊಕ್ಕರ್ಣೆ ಗುಡ್ಡೆಯಂಗಡಿ ಚೇತನ್ (24), ಕಕ್ಕುಂಜೆ ಗ್ರಾಮ ನೆಲ್ಲಿಮನೆ ಪ್ರಮೋದ (27), ಮುಂಬಯಿ ಗೋರೆಗಾವ್ ರವೀಂದ್ರ ಕೆ.ಸುವರ್ಣ (40) ಎಂಬವರ ವಶಕ್ಕೆ ಪಡೆಯಲಾಗಿದೆ.

ಕುಂದಾಪುರ ಉಪರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಲೋಹಿತ್ ಮಾರ್ಗದರ್ಶನದಲ್ಲಿ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಚಿದಾನಂದಪ್ಪ ಜಿ, ಮೊಳಹಳ್ಳಿ ಉಪರಣ್ಯಾಧಿಕಾರಿ ಮಂಜುನಾಥ ಜಿ.ನಾಯ್ಕ್ ಜೊತೆ ಅರಣ್ಯ ರಕ್ಷಕರಾದ ರವೀಂದ್ರ, ರವಿ, ಅರಣ್ಯ ವೀಕ್ಷಕ ಲಕ್ಷ್ಮಣ, ಪಿಸಿಪಿ ಸದಾಶಿವ, ಚಾಲಕ ಯೋಗೀಂದ್ರ ಕಾರ್‍ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ವನ್ಯಜೀವಿಗಳ ಬೇಟೆಯಾಡಲು ಬಂದವರ ಆಯುಧ ಸಮೇತ ಶಂಕರನಾರಾಯಣ ಕಾಳಭೈರವ ರಾತ್ರಿ ಗಸ್ತುಪಡೆ ವಾಹನ ಸಹಿತ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಡಬಲ್ ಬ್ಯಾರೆಲ್ ಗನ್, ಕಾರು, ಟಾರ್ಚ್, ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆಯಲಾಗಿದೆ‌.

Comments are closed.