
ಮಂಗಳೂರು : ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ರವಿವಾರ ಜಪ್ಪಿನಮೋಗರು ವಾರ್ಡಿನಲ್ಲಿ ಅನಿಲ್ ಶೆಟ್ಟಿ ಹಾಗು ಮಹಾಬಲ ಶೆಟ್ಟಿ ಅವರ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ನಡೆಸಲಾಯಿತು.
ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂರ್ಣಿಮಾ ರಾವ್, ಮಂಡಲದ ಪ್ರಧಾನ ಕಾರ್ಯದರ್ಶಿ ರೂಪ ಡಿ ಬಂಗೇರ, ಸುರೇಂದ್ರ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಳಾದ ನರ್ಮದಾ ರೈ ಮತ್ತು ಹರಿಣಿ ಕುಲಶೇಖರ, ಸ್ಥಳೀಯ ಮನಪಾ ಸದಸ್ಯೆ ವೀಣಾ ಮಂಗಳಾ ಮಂಡಲದ ಉಪಾಧ್ಯಕ್ಷರಾದ ಕಿರಣ್ ರೈ,ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಗಾಯತ್ರಿ ಲೋಕೇಶ್, ಶ್ರೀದೇವಿ ಆಚಾರ್, ಪ್ರಿಯಾ ಕೋಟ್ಯಾನ್, ರೂಪ , ಸುರೇಖಾ ರಾವ್, ಮಾಲತಿ ಅರುಣ್,ಮಮತಾ,ಪುಷ್ಪ ಶೆಟ್ಟಿ,ಕವಿತಾ,ಸುಜಾತ,ಮಂಡಲದ ಕಾರ್ಯಕಾರಿಣಿ ಸದಸ್ಯರಾದ ಸ್ನೇಹ,ಸುಜಾತ,ಸುಮತಿ ಮೊದಲಾದವರು ಉಪಸ್ಥಿತರಿದ್ದರು.
Comments are closed.