
ಮಂಗಳೂರು, ಜುನ್.03 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದುರಾದ ತೌಖ್ಯ ಚಂಡಮಾರುತದ ಪ್ರಭಾವದಿಂದಾಗಿ ಅಲೆಮಾರಿ ಶಿಳ್ಳಕ್ಯಾತ ಕುಟುಂಬದ ಗುಡಿಸಲುಗಳು ಟರ್ಪಾಲ್ಗಳು ತೀವ್ರವಾಗಿ ಹಾನಿಯಾಗಿದ್ದವು.
ಜಿಲ್ಲೆಯಲ್ಲಿ ಮುಂಗಾರು ಮಳೆಯೂ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಈ ಸಮುದಾಯದವರಿಗೆ 20*30 (350 GSM) .ಅಳತೆಯ ಟರ್ಪಾಲ್ ಗಳನ್ನು ಒದಗಿಸಿಕೊಡುವಂತೆ ಕೋರಲಾಗಿತ್ತು.
ಅದರಂತೆ ಜಿಲ್ಲೆಯಲ್ಲಿ ಮಾನ್ಸೂನ್ ಆರಂಭವಾಗಿರುವುದರಿಂದ ಶಿಳ್ಯಕ್ಯಾತ ಸಮುದಾಯದವರ ಸುರಕ್ಷತೆ ಹಿತದೃಷ್ಟಿಯಿಂದ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು, ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ಜು.3ರ ಶನಿವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಟರ್ಪಾಲ್ ಗಳನ್ನು ಶಿಳ್ಳೆಕ್ಯಾತ ಸಮುದಾಯದ ಕುಟುಂಬಗಳಿಗೆ ವಿತರಿಸಿದರು.
ಟಾರ್ಪಾಲಿನ್ ಪಡೆದ ಅಲೆಮಾರಿ ಶಿಳ್ಳೆಕ್ಯಾತ ಸಮುದಾಯವಾಸಿಗಳ ವಿವರ ಇಂತಿದೆ:
ಆನಂದ, ಹೊೈಗೆಬಜಾರ್ ಕ್ಯಾಂಪ್ ರಾಮ, ಹೊೈಗೆಬಜಾರ್ ಕ್ಯಾಂಪ್ ರವಿ, ಹೊೈಗೆಬಜಾರ್ ಕ್ಯಾಂಪ್, ಪುಟ್ಟ, ಹೊೈಗೆಬಜಾರ್ ಕ್ಯಾಂಪ್, ಮಹೇಶ, ಹೊೈಗೆಬಜಾರ್ ಕ್ಯಾಂಪ್, ಲೋಕೇಶ್, ಹೊೈಗೆಬಜಾರ್ ಕ್ಯಾಂಪ್, ಮಧು, ಹೊೈಗೆಬಜಾರ್ ಕ್ಯಾಂಪ್, ಶಿಲ್ಪಾ, ಹೊೈಗೆಬಜಾರ್ ಕ್ಯಾಂಪ್, ವೆಂಕಟೇಶ್, ಜಪ್ಪಿನಮೊಗರು, ಲೋಕೇಶ, ಜಿಪ್ಪಿನಮೊಗರು, ಲಕ್ಷ್ಮಣ, ಜಪ್ಪಿನಮೊಗರು, ಶಾಂತ, ಜಿಪ್ಪಿನಮೊಗರು, ಅಶೋಕ, ಕೂಳೂರು, ರಾಘವೇಂದ್ರ, ಕೂಳೂರು, ಬಾಬಯ್ಯ, ಬಂಗ್ರಕೂಳೂರು, ಅಣ್ಣಯ್ಯ, ಬಂಗ್ರಕೂಳೂರು ದೊರೆ, ಮುಳಿಹಿತ್ತು, ರಮೇಶ, ಮುಳಿಹಿತ್ತು, ಚಿರಂಜೀವಿ, ಮುಳಿಹಿತ್ತು, ನಾಗೇಶ್, ತೋಕೂರು, ಸುರೇಶ್, ತೋಕೂರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹೃಷಿಕೇಶ್ ಭಗವಾನ್ ಸೋನಾವಣೆ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿದ್ದರು.
Comments are closed.