
ಈಗಾಗಲೇ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಶುರು ಮಾಡಿರುವ ಕೆಜಿಎಫ್ ಚಾಪ್ಟರ್ 2 (KGF Chapter 2 )ಸಿನಿಮಾ ಬಿಡುಗಡೆಗೂ ಮೊದಲೇ ಹೊಸದೊಂದು ದಾಖಲೆ ನಿರ್ಮಿಸಿದೆ. ಕೆಜಿಎಫ್ ಚಾಪ್ಟರ್ 1 (KGF Chapter 1) ದಾಖಲೆಗಳನ್ನು ಮುರಿದಿರುವ ಕೆಜಿಎಫ್ ಚಾಪ್ಟರ್ 2 ಆಡಿಯೋ ಹಕ್ಕುಗಳು (KGF Chapter 2 Audio Rights) ಎಷ್ಟು ಕೋಟಿಗೆ ಮಾರಾಟವಾಗಿದೆ ಎಂದು ಗೊತ್ತಾದರೆ ನೀವು ಶಾಕ್ ಆಗುತ್ತೀರ!
ಕನ್ನಡ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲೇ ದಾಖಲೆ ನಿರ್ಮಿಸಿದ್ದ ಕೆಜಿಎಫ್ (KGF 1) ಸಿನಿಮಾದ 2ನೇ ಆವೃತ್ತಿ ಸದ್ಯದಲ್ಲೇ ತೆರೆಗೆ ಬರಲಿದೆ. ಕೊರೋನಾ ಹಿನ್ನೆಲೆಯಲ್ಲಿ ಥಿಯೇಟರ್ಗಳೆಲ್ಲ ಬಂದ್ ಆಗಿವೆ. ಹೀಗಾಗಿ, ತಮ್ಮ ಸಿನಿಮಾವನ್ನು ಚಿತ್ರಮಂದಿರದಲ್ಲೇ ಪ್ರದರ್ಶನ ಮಾಡಬೇಕೆಂದು ಕೆಜಿಎಫ್ ಚಾಪ್ಟರ್ 2 (KGF Chapter 2) ಚಿತ್ರತಂಡ ಕಾಯುತ್ತಿದೆ. ಈ ನಡುವೆ ಕೆಜಿಎಫ್ ಅಂಗಳದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಕೆಜಿಎಫ್ ಚಾಪ್ಟರ್ 1 ಸಿನಿಮಾದ ಆಡಿಯೋ ಹಕ್ಕುಗಳನ್ನು (KGF Chapter 2 Songs) ಖರೀದಿಸಿದ್ದ ಲಹರಿ ಮ್ಯೂಸಿಕ್ (Lahari Music) ಕೆಜಿಎಫ್ ಚಾಪ್ಟರ್ 2 ಸಿನಿಮಾದ ಆಡಿಯೋ ಹಕ್ಕುಗಳನ್ನು ಕೂಡ ಖರೀದಿಸಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳಂ ಭಾಷೆಗಳ ಕೆಜಿಎಫ್ 2 ಸಿನಿಮಾದ ಹಾಡುಗಳ ಹಕ್ಕುಗಳನ್ನು ಬರೋಬ್ಬರಿ 7 ಕೋಟಿ ರೂ. ಕೊಟ್ಟ ಲಹರಿ ಸಂಸ್ಥೆ ಖರೀದಿಸಿದೆ.
ಕೆಜಿಎಫ್ ಚಾಪ್ಟರ್ 2 ಆಡಿಯೋ ರೈಟ್ಸ್ಗೆ (KGF Chapter 2 Movie Audio Rights) ಲಹರಿ ಮ್ಯೂಸಿಕ್ 7 ಕೋಟಿ 20 ಲಕ್ಷ ರೂ. ನೀಡಿದೆ. ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಇಷ್ಟು ದೊಡ್ಡ ಮೊತ್ತಕ್ಕೆ ಆಡಿಯೋ ಹಕ್ಕು ಸೇಲ್ ಆಗಿರೋ ಮೊದಲ ಸಿನಿಮಾ ಕೆಜಿಎಫ್ ಚಾಪ್ಟರ್ 2. ಈ ಮೂಲಕ ಕೆಜಿಎಫ್ 2 ಬಿಡುಗಡೆಗೂ ಮೊದಲೇ ಹೊಸ ದಾಖಲೆ ನಿರ್ಮಿಸಿದೆ.
ಕೆಜಿಎಫ್ 2 ಸಿನಿಮಾದ ಕನ್ನಡ, ಹಿಂದಿ, ತಮಿಳು, ಮಲೆಯಾಳಂ, ತೆಲುಗು ಭಾಷೆಯ ಆಡಿಯೋ ರೈಟ್ಸ್ ಅನ್ನು ಲಹರಿ ಮ್ಯೂಸಿಕ್ ಖರೀದಿಸಿದೆ. ಈ ಹಿಂದೆ ಕೆಜಿಎಫ್ ಚಾಪ್ಟರ್ 1 ಆಡಿಯೋಗೆ 3.60 ಕೋಟಿ ಕೊಟ್ಟಿದ್ದ ಲಹರಿ ಸಂಸ್ಥೆ ಕೆಜಿಎಫ್ ಚಾಪ್ಟರ್ 2ಗೆ 7.20 ಕೋಟಿ ರೂ. ನೀಡಿದೆ ಎಂದು ಲಹರಿ ವೇಲು ಮಾಹಿತಿ ನೀಡಿದ್ದಾರೆ.
ಹೊಂಬಾಳೆ ಫಿಲ್ಮ್ಸ್ನಡಿ (Hombale Films) ನಿರ್ಮಾಣವಾಗಿರುವ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಕೆಜಿಎಫ್ ಚಾಪ್ಟರ್ 2 (KGF 2) ಸಿನಿಮಾಗೂ ರವಿ ಬಸ್ರೂರು (Ravi Basrur) ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ (Rocking Star Yash), ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ ಮುಂತಾದವರು ಮುಖ್ಯ ಪಾತ್ರದಲ್ಲಿರುವ ಕೆಜಿಎಫ್-2 ಸಿನಿಮಾದ ಟೀಸರ್ ಈಗಾಗಲೇ ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ನಿನ್ನೆ ಲಹರಿ ಆಡಿಯೋ ಸಂಸ್ಥೆ ಮಾಲೀಕರಾದ ಮನೋಹರ್ ನಾಯ್ಡು ಹಾಗೂ ಲಹರಿ ವೇಲು ಅವರನ್ನು ಭೇಟಿಯಾದ ನಿರ್ಮಾಪಕ ವಿಜಯ್ ಕಿರಗಂದೂರ್ ಕೆಜಿಎಫ್ 2 ಚಿತ್ರದ ಆಡಿಯೋ ರೈಟ್ಸ್ ಮಾರಾಟದ ಪ್ರತಿಯನ್ನು ಹಸ್ತಾಂತರಿಸಿದ್ದಾರೆ. ಕೆಜಿಎಫ್ 2 ಚಿತ್ರದಲ್ಲಿ ಒಟ್ಟು 6 ಹಾಡುಗಳಿವೆ.
ಕೆಜಿಎಫ್ 1 ನಂತೆಯೇ ಕೆಜಿಎಫ್ 2 ಚಿತ್ರ ಸಹ ಸಾಕಷ್ಟು ನಿರೀಕ್ಷೆ, ಕುತೂಹಲ ಹುಟ್ಟುಹಾಕಿದೆ. ಸ್ಟಾರ್ ಸಹ ಅದ್ದೂರಿಯಾಗಿದ್ದು ಅಧೀರರಾಗಿ ಬಾಲಿವುಡ್ ಸೂಪರ್ ಸ್ಟಾರ್ ಸಂಜಯ್ ದತ್ ರಮಿಕಾ ಸೇನ್ ಪಾತ್ರದಲ್ಲಿ ಬಾಲಿವುಡ್ ನಟಿ ರವೀನಾ ಟಂಡನ್, ತೆಲುಗು ನಟ ರಾವ್ ರಮೇಶ್ ಹಾಗೂ ಪ್ರಕಾಶ್ ರಾಜ್ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಈಗಾಗಲೇ ಸಂಜಯ್ ದತ್ ಅವರ ಅಧೀರ ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಕೆಜಿಎಫ್ 2 ಬಗೆಗಿನ ನಿರೀಕ್ಷೆಯನ್ನು ಜಾಸ್ತಿ ಮಾಡಿದೆ. ಮಾತ್ರವಲ್ಲ ಭಾರತದ ಪ್ರಧಾನಿ ರಮಿಕಾ ಸೇನ್ ಪಾತ್ರದಲ್ಲಿ ಪಾತ್ರದಲ್ಲಿ ರವೀನಾ ಟಂಡನ್ ಅವರು ನಟಿಸಿದ್ದು, ಅವರ ಲುಕ್ ಕೂಡ ಸಾಕಷ್ಟು ಕುತೂಹಲ ಮೂಡಿಸುವಂತಿದೆ.
Comments are closed.