
ಬಾಲಿ: ಇಂಡೋನೇಷಿಯಾದ ಖ್ಯಾತ ಗಾಯಕಿಯೊಬ್ಬರು ಇದೀಗ ಸುದ್ದಿಯಲ್ಲಿದ್ದಾರೆ. 49 ವರ್ಷದ ಅವರು ತಮ್ಮ ಮಕ್ಕಳೊಂದಿಗೇ ಕುಳಿತು ಪಾರ್ನ್ ವಿಡಿಯೋಗಳನ್ನು ನೋಡುತ್ತಾರಂತೆ! ಅದಷ್ಟೇ ಅಲ್ಲದೆ ಅದರ ಬಗ್ಗೆ ಏನೆನಿಸಿತು ಎಂದೂ ಕೇಳುತ್ತಾರಂತೆ!
ಈ ರೀತಿ ಮಾಡುವುದು ಇಂಡೋನೇಷಿಯಾದ ಗಾಯಕಿ ವಾಹ್ಯು ಸೆಟ್ಯಾನಿಂಗ್ ಬುಡಿ. ಆಕೆಗೆ ಯೂನಿ ಶರಾ ಎಂದೂ ಕರೆಯಲಾಗುತ್ತದೆ. ಗಾಯಕಿಗೆ ವಯಸ್ಸಿಗೆ ಬಂದ ಇಬ್ಬರು ಗಂಡು ಮಕ್ಕಳಿದ್ದು, ಆಕೆ ಬಿಡುವಿನ ವೇಳೆಯಲ್ಲಿ ಮಕ್ಕಳೊಂದಿಗೆ ಕುಳಿತು ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುತ್ತಾರಂತೆ. ಮಕ್ಕಳಿಗೆ ಸೆಕ್ಸ್ ಎಜುಕೇಶನ್ ಮುಖ್ಯ, ಹಾಗಾಗಿ ನಾನು ಅದನ್ನು ಅವರೊಂದಿಗೆ ನೋಡುತ್ತೇನೆ ಎಂದು ಆಕೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ವಿಡಿಯೋ ನೋಡಿದ ನಂತರ ವಿಡಿಯೋ ಹೇಗೆನಿಸಿತು ಎಂದು ಮಕ್ಕಳನ್ನು ಕೇಳುತ್ತೇನೆ. ಆಗ ಅವರು ಅಮ್ಮ ಹೀಗೆ ಮಾಡಬೇಡಿ ಎಂದು ಹೇಳುತ್ತಾರೆ. ಅದಕ್ಕೆ ನಾನು ಇದು ತುಂಬಾ ಸಾಮಾನ್ಯ ಎಂದು ಹೇಳಿ ಉತ್ತರಿಸುತ್ತೇನೆ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದಾರೆ. ಅವರ ಈ ಸಂದರ್ಶನ ಭಾರೀ ವೈರಲ್ ಆಗಿದೆ.
Comments are closed.