ಕರಾವಳಿ

ಅಸ್ವಸ್ತರಿಗೆ ಹಾಗು 70 ವಷ೯ ಮೇಲ್ಪಟ್ಟವರಿಗೆ ಮನೆ ಮನೆಗೆ ತೆರಳಿ ಲಸಿಕೆ ನೀಡುವ ಬಗ್ಗೆ ಪೂವ೯ಬಾವಿ ಸಭೆ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅಸ್ವಾಸ್ತ್ಯದಿಂದ ಹಾಸಿಗೆ ಹಿಡಿದ ಹಾಗೂ 70 ವಷ೯ ಮೇಲ್ಪಟ್ಟವರು ಲಸಿಕಾ ಕೇಂದ್ರಕ್ಕೆ ಬರಲು ಅಸಾಧ್ಯವಾಗಿರುವವರಿಗೆ ಕೋರೊನಾ ಲಸಿಕೆಯನ್ನು ಮನೆ ಮನೆಗೆ ತೆರಳಿ ನೀಡುವ ಕಾಯ೯ಕ್ರಮವನ್ನು ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಆಯೋಜಿಸಲು ನಿಣ೯ಯಿಸಲಾಗಿದೆ.

ಈ ಕಾಯ೯ಕ್ರಮಕ್ಕೆ ಚಾಲನೆ ನೀಡಲು ಮೇಯರ್ ಪ್ರೇಮಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಪೂವ೯ಬಾವಿಯಾಗಿ ಸಭೆ ಕರೆಯಲಾಯಿತು.

ಸಭೆಯಲ್ಲಿ ಹಲವಾರು ವಿಷಯಗಳ ಕುರಿತು ಚಚೆ೯ ನಡೆಯಿತು. ಸದ್ರಿ ಕಾಯ೯ಕ್ರಮವನ್ನು ಪ್ರಾರಂಭಿಸಲು ಯಾವುದೆಲ್ಲ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಯಾವ ರೀತಿಯಲ್ಲಿ ಲಸಿಕೆಯನ್ನು ಅನಾರೋಗ್ಯ ವ್ಯಕ್ತಿಗಳಿಗೆ ಮತ್ತು ಅವರ ಹಾರೈಕೆದಾರರಿಗೆ ನೀಡಬೇಕು ಎನ್ನುವ ವಿಚಾರದ ಬಗ್ಗೆ ಮಾಹಿತಿ ತಿಳಿಸಲಾಯಿತು.

ಸಭೆಯಲ್ಲಿ ಹಾಜರಿದ್ದ ಮಹಾನಗರಪಾಲಿಕೆಯ ಸದಸ್ಯರುಗಳು ಲಸಿಕೆ ನೀಡುವಲ್ಲಿ ವಿಳಂಭವಾಗುತ್ತಿದ್ದು, ಪಾಲಿಕೆಯ 10 ವಾಡು೯ಗಳಲ್ಲಿ ಮಾತ್ರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾಯ೯ಚರಿಸುತ್ತಿರುವುದರಿಂದ ಉಳಿದ ವಾಡು೯ಗಳಲ್ಲಿನ ಸಾವ೯ಜನಿಕರಿಗೆ ಕೇವಲ ಈ 10 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೆರಳಿ ಲಸಿಕೆ ಪಡೆಯಲು ಅನಾನುಕೂಲವಾಗುವುದನ್ನು ಸಭೆಯ ಗಮನಕ್ಕೆ ತಂದು ಲಸಿಕೆ ಕೇಂದ್ರಗಳನ್ನು ಪಾಲಿಕೆಯ ಎಲ್ಲಾ 60 ವಾಡು೯ಗಳಲ್ಲಿ ಸ್ಥಾಪಿಸುವಂತೆ ಸಲಹೆಗಳನ್ನು ನೀಡಿದರು.

ಇದಕ್ಕೆ ಉತ್ತರಿಸಿದ ತಾಲೂಕು ವೈದ್ಯಾಧಿಕಾರಿ ಡಾ| ಸುಜಯ್ ಭಂಡಾರಿಯವರು ಈ ಕುರಿತು ಈಗಾಗಲೇ ಗಮನ ಹರಿಸಲಾಗಿದ್ದು, ಮುಂದೆ ಲಸಿಕೆಯು ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.

ಈ ಸಭೆಯಲ್ಲಿ ಉಪಮಹಾಪೌರರಾದ ಸುಮಂಗಳಾ ರಾವ್, ಪಾಲಿಕೆಯ ಎಲ್ಲಾ ಸದಸ್ಯರು, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾದ ಶಾಂತಾರಾಮ್ ಶೆಟ್ಟಿ, ಸದಸ್ಯರಾದ ಪ್ರಭಾಕರ್ ಶಮಾ೯, ಯತೀಶ್ ಬೈಕಂಪಾಡಿ, ಸುಕ್ ಪಾಲ್ ಪೊಳಲಿ, ತಾಲೂಕು ವೈದ್ಯಾಧಿಕಾರಿಯಾದ ಡಾ| ಸುಜಯ್ ಭಂಡಾರಿ, ಪಾಲಿಕೆಯ ಆರೋಗ್ಯಾಧಿಕಾರಿ ಡಾ| ಮಂಜಯ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Comments are closed.