ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಗಣನೀಯವಾಗಿ ಇಳಿಕೆಯಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 8.5% ಪಾಸಿಟಿವಿಟಿ ರೇಟ್ ಇದೆ. ಮುಂದಿನ ಮೂರು ದಿನಗಳಲ್ಲಿ ಅದು 5% ಗೂ ಕಡಿಮೆಯಾಗುವ ವಿಶ್ವಾಸವಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ವೈ ಹೇಳಿದ್ದಾರೆ.
ಕುಂದಾಪುರ ತಾಲೂಕು ಕುಂಭಾಸಿಯ ಮಕ್ಕಳ ಮನೆಗೆ ಶುಕ್ರವಾರ ಬೆಳಿಗ್ಗೆ ಆಗಮಿಸಿದ್ದ ಅವರು ಪತ್ರಕರ್ತರ ಜೊತೆ ಮಾತನಾಡಿದರು.

ಮೊದಲಿಗೆ ಜಿಲ್ಲೆಯಲ್ಲಿನ 50ಕ್ಕಿಂತ ಅಧಿಕ ಪಾಸಿಟಿವ್ ಪ್ರಕರಣವಿರುವ 40 ಗ್ರಾಮಪಂಚಾಯತ್ ಕಂಪ್ಲೀಟ್ ಸೀಲ್ಡೌನ್ ಮಾಡಲಾಗಿತ್ತು. ಮಂಗಳವಾರ ಜನಪ್ರತಿನಿಧಿಗಳ ನೇತೃತ್ವ ಸಭೆ ನಡೆಸಿದ್ದು ಪ್ರಸ್ತುತ 16 ಗ್ರಾಪಂ ಸೀಲ್ ಡೌನ್ ಆಗಿದೆ. ಅದರಲ್ಲಿ ಈಗ 9 ಗ್ರಾ.ಪಂನಲ್ಲಿ ಮಾತ್ರ ಪ್ರಸ್ತುತ 50ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳಿದೆ. ಅಂತಹ ಗ್ರಾ.ಪಂ ಭಾನುವಾರದವರೆಗೂ ಸೀಲ್ಡೌನ್ ಆಗಿರಲಿದ್ದು ಸೋಮವಾರದಿಂದ ಜಿಲ್ಲೆ ಅನ್ ಲಾಕ್ ಆಗುವ ಹಿನ್ನೆಲೆ ಇಂತಹ ಗ್ರಾ.ಪಂ ಸೀಲ್ಡೌನ್ ಬಗ್ಗೆ ಮತ್ತೆ ನಿರ್ಧರಿಸುತ್ತೇವೆ. ಜಿಲ್ಲೆಯಲ್ಲಿ 600-700 ಬರುತ್ತಿದ್ದ ಪಾಸಿಟಿವ್ ಕೇಸ್ 200-300ಕ್ಕೆ ಇಳಿದಿದೆ. ಜಿಲ್ಲೆಯಲ್ಲಿ ಟೆಸ್ಟಿಂಗ್ ಕೂಡ ಹೆಚ್ಚಿಸಲಾಗಿದೆ. ಮುಂದಿನ 1 ವಾರದಲ್ಲಿ 4000 ಟೆಸ್ಟ್ ಮಾಡಿ ಪಾಸಿಟಿವಿಟ್ ರೇಟ್ ಆಧರಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಇದೇ ಸಂದರ್ಭ ಹೇಳಿದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.