ಕರಾವಳಿ

ಕೊರೋನಾ ಕರ್ತವ್ಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಸಮಸ್ಯೆಯಾದರೆ ಪೊಲೀಸರ‌‌ ಸಹಕಾರ ಪಡೆಯಿರಿ: ಸಚಿವ ಕೋಟ

Pinterest LinkedIn Tumblr

ಕುಂದಾಪುರ: ತಲ್ಲೂರು ಗ್ರಾಮದಲ್ಲೂ ಲಸಿಕೆ ವಿತರಣೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಗಂಗೊಳ್ಳಿ ಆರೋಗ್ಯ ಕೇಂದ್ರಕ್ಕೆ ಹೋಗಿ ಲಸಿಕೆ ಪಡೆಯುವುದು ಹೊರೆಯಾಗಿದ್ದು, ಸ್ಥಳೀಯ ಜನ ಸಂಖ್ಯೆಗೆ ಅನುಗುಣವಾಗಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುತ್ತದೆ. ಲಸಿಕೆ ತಲ್ಲೂರು ಗ್ರಾಮಕ್ಕೆ ಪೂರೈಕೆ ಮಾಡಲು ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಲಾಗುತ್ತದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ತಲ್ಲೂರು ಡಾ.ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ನಡೆದ ಗ್ರಾಮ ಪಂಚಾಯಿತಿ ಕೊರೋನಾ ನಿರ್ಮೂಲನಾ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿ, ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಲಸಿಕೆಯ ಪ್ರಮಾಣದಲ್ಲಿ ಒಂದಿಷ್ಟು ತಲ್ಲೂರು ಗ್ರಾಮ ವಾಸಿಗಳಿಗೆ ನೀಡಲು ಹಟ್ಟಿಯಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಮಾಡಲು ಸೂಚಿಸುತ್ತೇನೆ ಎಂದರು.

ತಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ತಲ್ಲೂರು, ಕುಂದಾಪುರ ತಾಪಂ ಮಾಜಿ ಸದಸ್ಯ ಕರಣ್ ಪೂಜಾರಿ ಲಸಿಕೆ ಸಮಸ್ಯೆ ಬಗ್ಗೆ ಸಚಿವರ ಗಮನ ಸೆಳೆದಿದ್ದರು.

ಗ್ರಾಮ ಪಂಚಾಯಿತಿಗಳು ಸ್ವಯಂಪ್ರೇರಿತ ಲಾಕ್‌ಡೌನ್ ಮಾಡಿಕೊಳ್ಳುವ ಮೂಲಕ ಕರೋನಾ ಪ್ರಕರಣಗಳು ಕಡಿಮೆ ಆಗುತ್ತಿದೆ. ಕೊರೋನಾ ವಾರಿಯರ್‍ಸ್, ಆಶಾ ಹಾಗೂ ಅಂಗನವಾಡಿ ಕಾರ್‍ಯಕರ್ತೆಯರು ಪಾಸಿಟಿವ್ ಬಂದವರ ಮೇಲೆ ಕಣ್ಣಿಡುವ ಜೊತೆ ಮನೆಗಳ ಸೀಲ್‌ಡೌನ್ ಮಾಡಿ, ಪಾಸಿಟಿವ್ ವ್ಯಕ್ತಿ ಬೇಕಾಬಿಟ್ಟಿ ಅಡ್ಡಾಡದಂತೆ ಕಣ್ಣಿಡಬೇಕು. ಕರೋನಾ ಇಳಿಮುಖ ಆಗುತ್ತಿರುವುದು ಕಾರ್ಯಪಡೆ ಜವಾಬ್ದಾರಿ ಕರೋನಾ

ವಾರಿಯರ್‍ಸ್ ಪರಿಶ್ರಮ ಇದೆ ಎಂದು ಹೇಳಿದರು.
ಕೊರೊನಾ ಸಂಬಂಧ ಕೊರೋನಾ ವಾರಿಯ್ಸರ್ ಸಮಸ್ಯೆ ಆದರೆ ಮೇಲಿನವರ ಗಮನಕ್ಕೆ ತನ್ನಿ ಎಂದ ಅವರು, ಕಾನೂನು ಸಮಸ್ಯೆ ಎದುರಾದರೆ ಪೊಲೀಸ್ ಸಹಕಾರ ಪಡೆದು ನಿರ್ಧಾಕ್ಷಣ್ಯವಾಗಿ ಕರ್ತವ್ಯ ನಿರ್ವಹಸುವ ಮೂಲಕ ತಲ್ಲೂರು ಗ್ರಾಮ ಕೊರೋನಾ ಮುಕ್ತ ಮಾಡಬೇಕು ಎಂದು ಹೇಳಿದರು.

ಕುಂದಾಪುರ ತಾಲೂಕು ಪಂಚಾಯಿತಿ ಇಒ ಕೇಶವ ಶೆಟ್ಟಿಗಾರ್, ತಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭೀಮವ್ವ, ಉಪಾಧ್ಯಕ್ಷ ಗಿರೀಶ್ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ತಲ್ಲೂರು, ಹಕ್ಲಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರಂಜಿತ್, ಕುಂದಾಪುರ ಸಹಾಯಕ‌ ಉಪನಿರೀಕ್ಷಕ ಸುಧಾಕರ್ ಇದ್ದರು.

ತಲ್ಲೂರು ಗ್ರಾಪಂ ಪಿಡಿಒ ನಾಗೇಂದ್ರ ಕರೋನಾ ಕಾರ್ಯಪಡೆ ಕುರಿತು ಮಾಹಿತಿ ನೀಡಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.