
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಸಂಗ ಹಾಗೂ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವವರಿಗೆ ಪ್ರಥಮ ಆದ್ಯತೆ ಮೇರೆಗೆ ಕೋವಿಡ್ 19 ಲಸಿಕೆಯನ್ನು ನೀಡಲು ಉದ್ದೇಶಿಸಲಾಗಿರುತ್ತದೆ.
ಜಿಲ್ಲೆಯಿಂದ ವ್ಯಾಸಂಗ ಹಾಗೂ ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವವರು ವಿದೇಶಕ್ಕೆ ತೆರಳುವ ಬಗ್ಗೆ ಪೂರಕ ದಾಖಲೆಗಳೊಂದಿಗೆ Annexure -3 ರಲ್ಲಿ ಅರ್ಜಿಯನ್ನು ಎಸ್. ಎ. ಪ್ರಭಾಕರ ಶರ್ಮ, ಕಾರ್ಯದರ್ಶಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಘಟಕ, ರೆಡ್ ಕ್ರಾಸ್ ಭವನ, ಜಿಲ್ಲಾಧಿಕಾರಿ ಕಛೇರಿ ಹಿಂದುಗಡೆ, ಮಂಗಳೂರು ಇವರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂ. 0824 – 2423755 ಹಾಗೂ Annexure -3 ಜಿಲ್ಲಾ ವೆಬ್ ಸೈಟ್ ( dk.nic.in ) ನಿಂದ ಪಡೆಯಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷ, ಹಾಗೂ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.