ಕರಾವಳಿ

ತನ್ನ ಜಿಲ್ಲೆಯಲ್ಲಿನ ವಲಸೆ ಕಾರ್ಮಿಕರಿಗೆ ದಿನಸಿ ಕಿಟ್ ಕಳಿಸಿ ಮಾನವೀಯತೆ ತೋರಿದ ಉಡುಪಿ ಮೂಲದ ಪತ್ರಕರ್ತೆ

Pinterest LinkedIn Tumblr

ಉಡುಪಿ: ಕೊರೋನಾ ಎರಡನೇ ಅಲೆ ದೇಶಾದ್ಯಂತ ಬಿಗಡಾಯಿಸಿದ್ದು ಒಂದೆಡೆಯಾದರೆ ಲಾಕ್ ಡೌನ್ ನಿಂದ ಬಡ ಹಾಗೂ ಮದ್ಯಮ ವರ್ಗ ಅದರಲ್ಲೂ ದಿನಗೂಲಿ ಕಾರ್ಮಿಕರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ. ತನ್ನ ಜಿಲ್ಲೆಯ ಅಂತ ವಲಸೆ ಕಾರ್ಮಿಕರಿಗೆ ಆಹಾರ ಸಾಮಾಗ್ರಿ ಕಿಟ್ ಕಳಿಸಿ ಪತ್ರಕರ್ತೆಯೊಬ್ಬರು ಮಾನವೀಯತೆ ಮೆರೆದಿದ್ದಾರೆ.

ಹೌದು…ಕಳೆದ ವರ್ಷ ಕೊರೋನಾ ಮೊದಲ ಅಲೆಯ ಹೊತ್ತಿಗೆ ನೂರಾರು ದಾನಿಗಳು ಸಂಘಸಂಸ್ಥೆಗಳು ಆಹಾರ ಸಾಮಗ್ರಿಗಳನ್ನು ಕೊಟ್ಟು ಆಧಾರವಾಗಿದ್ದರು.

ಅಂತೆಯೇ ಎರಡನೇ ಅಲೆಯಲ್ಲೂ ಈ ಬಾರಿ ದಾನಿಗಳ ನೆರವು ಅಂಬ್ಯುಲೆನ್ಸ್, ಬೆಡ್ ಗಳು,ಆಕ್ಸಿಜನ್, ವೆಂಟಿಲೇಟರ್ ಗಳಿಗೆಂದು ಹರಿದು ಬಂದಿದೆ.

ಜೋಪಡಿ ಹಾಕಿಕೊಂಡು ಊರಿಂದ ಊರಿಗೆ ಕೆಲಸಕ್ಕೆ ಬಂದಿರುವ ವಲಸೆ ಕಾರ್ಮಿಕರಂತೂ ಒಪ್ಪತ್ತಿನ ಊಟಕ್ಕೆ ಹೆಣಗಾಡುವಂತಾಗಿದೆ. ಸದ್ಯ ಉಡುಪಿಯಲ್ಲಿ ಅಂತಹ ವಲಸೆ ಕಾರ್ಮಿಕರನ್ನು ಗುರುತಿಸಿ ದಿನಸಿ ಕಿಟ್ ಗಳನ್ನು ನೀಡುವ ಕಾರ್ಯ ಭರದಿಂದ ಸಾಗುತ್ತಿದೆ. ಉಡುಪಿ ಜಿಲ್ಲೆಯ ಅಚ್ಲಾಡಿ ಮೂಲದ ಪ್ರಸ್ತುತ ದಿಗ್ವಿಜಯ ನ್ಯೂಸ್  ನಿರೂಪಕಿ ಮಮತಾ ಹೆಗ್ಡೆ ಸರಿಸುಮಾರು 375 ವಲಸೆ ಕಾರ್ಮಿಕರ ಕುಟುಂಬಗಳಿಗೆ ಕಿಟ್ ಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ಸಂಕಷ್ಟದ ಸಮಯದಲ್ಲಿ ತನ್ನ ಸ್ವಂತ ಖರ್ಚಿನಲ್ಲಿ ದಿನಸಿ ಕಿಟ್ ಗಳನ್ನು ಬಡಕೂಲಿ ಕಾರ್ಮಿಕರ ಜೋಪಡಿಗಳಿಗೆ ತಲುಪಿಸಿದ ಮಮತಾ ಹೆಗ್ಡೆಯವರ ಕಾರ್ಯಕ್ಕೆ ಸಾಮಾಜಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.