ಕರಾವಳಿ

ಕೊಲ್ಲೂರು: ವಂಡ್ಸೆ ಬಳಿ ಭೀಕರ ರಸ್ತೆ ಅಪಘಾತ; ಟಿಪ್ಪರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ದಾರುಣ ಮೃತ್ಯು

Pinterest LinkedIn Tumblr
ಕುಂದಾಪುರ: ಟಿಪ್ಪರ್ ಹಾಗೂ ದ್ವಿಚಕ್ರ ವಾಹನ ಅಪಘಾತದಲ್ಲಿ ದ್ವಿಚಕ್ರ ವಾಹನ‌ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ವಂಡ್ಸೆ ಬಳಿ‌ ಮೇ.28 ಶುಕ್ರವಾರ ನಡೆದಿದೆ. ರಾಜು ಮೊಗವೀರ ಮೃತಪಟ್ಟ ದ್ವಿಚಕ್ರ ವಾಹನ ಸವಾರ. 
ಘಟನೆ ವಿವರ: ವಂಡ್ಸೆ- ಬೆಳ್ಳಾಲ ರಸ್ತೆಯಲ್ಲಿ ವಂಡ್ಸೆ ಕಡೆಯಿಂದ ಬೆಳ್ಳಾಲ ಕಡೆಗೆ ಆರೋಪಿ ಟಿಪ್ಪರ್ ಚಾಲಕ ರತ್ನಾಕರ ಎಂಬಾತ ಟಿಪ್ಪರ್ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬೆಳ್ಳಾಲ ಕಡೆಯಿಂದ ವಂಡ್ಸೆ ಕಡೆಗೆ ರಾಜು ಮೊಗವೀರ ಬರುತ್ತಿದ್ದ ಸ್ಕೂಟರ್ ಗೆ ಎದುರಿನಿಂದ ಡಿಕ್ಕಿ  ಹೊಡೆದ ಪರಿಣಾಮ ರಾಜು ಸ್ಕೂಟರ್ ಸಮೇತ ರಸ್ತೆಗೆಬಿದ್ದು ಟಿಪ್ಪರಿನ ಎದುರಿನ ತಲೆಯ ಮೇಲೆ ಹರಿದಿದ್ದು ತೀವ್ರ ಸ್ವರೂಪದ  ಗಾಯಗೊಂಡು ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ‌ ಕೊಲ್ಲೂರು ಪಿಎಸ್ಐ ನಾಸೀರ್ ಹುಸೇನ್, ಸಿಬ್ಬಂದಿಗಳು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.