ಕರಾವಳಿ

ದ.ಕ.ಜಿಲ್ಲೆಯಲ್ಲಿ ಇಂದಿನಿಂದ ಕೋವಿಡ್ ಲಸಿಕೆ ಲಭ್ಯವಿಲ್ಲ : ಮುಂದಿನ ದಿನಾಂಕ ನಿರೀಕ್ಷಿಸಿ..

Pinterest LinkedIn Tumblr

ಮಂಗಳೂರು, ಮೇ 25 :ಜಿಲ್ಲೆಯಲ್ಲಿ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೇ 25 ರಿಂದ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ಲಭ್ಯತೆಯು ಇಲ್ಲದಿರುವ ಕಾರಣ ಯಾವುದೇ ಲಸಿಕಾ ಶಿಬಿರವು ಇರುವುದಿಲ್ಲ.

ಮುಂದಿನ ಲಸಿಕಾ ಶಿಬಿರವನ್ನು ಲಸಿಕೆಯ ಲಭ್ಯತೆಯ ನಂತರ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗುವುದು ಎಂದು ಮಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

Comments are closed.