ಕುಂದಾಪುರ: 13 ವರ್ಷಗಳ ಕಾಲ ತಂದೆಯನ್ನೇ ಕಾಣದ ಬಾಲಕಿಗೆ ಇಲಾಖಾ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ತಂದೆಯನ್ನು ಕರೆಸಿ ಬಾಲಕಿಯ ಕನಸು ನನಸು ಮಾಡಿದ ಕೊಲ್ಲೂರು ಪೊಲೀಸ್ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

(ಸಾಂದರ್ಭಿಕ ಚಿತ್ರ)
ನಗರ ಮೂಲದ ಕುಟುಂಬವೊಂದು ಕೌಟಂಬಿಕ ಕಲಹದಿಂದ ಗಂಡ ಹೆಂಡತಿ ಬೇರೆ ಬೇರೆ ವಾಸಿಸುತ್ತಿದ್ದು ಎರಡು ಮಕ್ಕಳು ತಾಯಿ ಜೊತೆ ವಾಸವಿದ್ದರು. ಆದರೆ 16 ವರ್ಷದ ಬಾಲಕಿ ಸೋಮವಾರ ಪಕ್ಕದ ಮನೆಯ ಪರಿಚಿತರೊಂದಿಗೆ ತನ್ನ ತಂದೆಯಿರುವ ಹೆಮ್ಮಾಡಿಗೆ ಹೋಗಬೇಕೆಂದು ಬರುವಾಗ ನಿಟ್ಟೂರು ಕೊಲ್ಲೂರು ಸಮೀಪದ ಚೆಕ್ ಪೋಸ್ಟ್ ಬಳಿ ಅಪ್ರಾಪ್ತ ಬಾಲಕಿ ಲಾಕ್ ಡೌನ್ ಸಮಯ ಪ್ರಯಾಣದ ಬಗ್ಗೆ ವಿಚಾರಿಸಿದಾಗ ತಂದೆ ಅಪಘಾತದಿಂದ ಕಾಲು ಮುರಿದುಕೊಂಡಿದ್ದಾರೆ ಅವರನ್ನು ನೋಡಬೇಕು ನಾನು ಅಮ್ಮನಲ್ಲಿ ಹೇಳದೆ ಬಂದಿರುವುದಾಗಿ ತಿಳಿಸಿದ್ದಳು. ಕೊಲ್ಲೂರು ಪೊಲೀಸ್ ಉಪ ನಿರೀಕ್ಷಕ ನಾಸೀರ್ ಹುಸೈನ್ ರವರು ತಕ್ಷಣ ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದು ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ಕೊಲ್ಲೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಅಪ್ರಾಪ್ತ ಬಾಲಕಿಯನ್ನು ಸಮಾಲೋಚನೆ ಗೊಳಪಡಿಸಿದಾಗ 13 ವರ್ಷ ತಂದೆಯನ್ನು ಬಿಟ್ಟಿದ್ದೂ ಅವರನ್ನು ನೋಡಲೇಬೇಕು ಎಂದು ಪರಿತಪಿಸುವ ಕ್ಷಣ ಮನಕಲುಕುವಂತಿತ್ತು.
ಕೂಡಲೇ ತಂದೆಯವರನ್ನು ಸಂಪರ್ಕಿಸಿ ಬಾಲಕಿಗೆ ತಂದೆಯೊಡನೆ ಮಾತಾಡಲು ಅವಕಾಶ ಕಲ್ಪಿಸಿದಾಗ ಬಾಲಕಿಯ ಖುಶಿಗೆ ಪಾರವೇ ಇಲ್ಲ. ಬಾಲಕಿಗೆ ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸಿದ್ದು ಪ್ರಸ್ತುತ ಈಗ ಎಸ್ಎಸ್ಎಲ್ಸಿ ಓದುತ್ತಿದಾಳೆ. ಬಾಲಕಿಗೆ ತಾಯಿಯೊಂದಿಗೆ ಇರಲು ಇಷ್ಟವಿಲ್ಲದೆ ಇರುವುದರಿಂದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ರೊನಾಲ್ಡ್ ಫುರ್ಟಾಡೋ ಅವರ ಆದೇಶದಂತೆ ನಮ್ಮ ಭೂಮಿ ಕನ್ಯಾನ ಈ ಸಂಸ್ಥೆಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
ಕೌಟಂಬಿಕ ಕಲಹದಿಂದ ಮಕ್ಕಳ ಭವಿಷ್ಯಕ್ಕೆ ಎಷ್ಟು ಪರಿಣಾಮ ಬೀಳುತ್ತದೆನ್ನುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಬಾಲಕಿಯ ಪಾಲನೆ ಪೋಷಣೆ ಮತ್ತು ಅವಳ ಆಸೆಯಂತೆ ಪೊಲೀಸ್ ಅಧಿಕಾರಿ ಆಗಬೇಕೆಂದಿರುವ ಬಾಲಕಿಗೆ ಉನ್ನತ ಶಿಕ್ಷಣದ ಜವಾಬ್ದಾರಿಯನ್ನು ಪಿಎಸ್ಐ ನಾಸಿರ್ ಹುಸೈನ್ ಮತ್ತು ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ ವಹಿಸಲಿದ್ದಾರೆ.
Comments are closed.