
ಮುಂಬಯಿ: ಮುಂಗಳೂರು ಶಕ್ತಿ ನಗರದ ನಿವಾಸಿ, ಜನಪ್ರಿಯ ಸಮಾಜ ಸೇವಕಿ ದೇವಕಿ ಬಿ. ಬಂಗೇರ (82) ಅವರು ವೃದ್ದ್ಯಾಪ್ಯ ದಿಂದಾಗಿ ಮೇ. 24 ರಂದು ಮುಂಗಳೂರಿನ ಶಕ್ತಿ ನಗರದ ಸ್ವಗೃಹದಲ್ಲಿ ನಿಧನಹೊಂದಿದರು.
ಮೃತರು ಬಂಟ್ವಾಳ ತಾಲೂಕು ಕುಲಾಲ ಸಂಘದ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ನಮಿತಾ ಉಮೇಶ್ ಸೇರಿ ಇಬ್ಬರು ಪುತ್ರಿಯರು, ಮೂವರು ಪುತ್ರರನ್ನು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇವರು ಮಂಗಳೂರಿನ ಕುಲಶೇಖರ ವೀರನಾರಾಯಣ ದೇವಸ್ಥಾನದ ಅಭಿವೃದ್ದಿಯ ರೂವಾರಿಯಾಗಿದ್ದ ದಿವಂಗತ ಜಾನು ಮೂಲ್ಯರ ಸುಪುತ್ರಿ ಹಾಗೂ ಬೋಳೂರು ಶ್ರೀ ರಾಮಾಂಜನೇಯ ತಾಲೀಮು ಮತ್ತು ವ್ಯಾಯಾಮ ಶಾಲೆಯ ಕಾರ್ಯದರ್ಶಿ ನಾಗೇಶ್ ಕುಲಾಲ ಅವರ ಅತ್ತೆಯಾಗಿದ್ದು, ದೀರ್ಘ ಕಾಲ ಸಮಾಜ ಸೇವಾ ನಿರತರಾಗಿದ್ದರು. ಮಂಜೇಶ್ವರ ವರ್ಕಾಡಿ ಯ ಬಂಜನ್ ಮೂಲಸ್ಥಾನದ ಮಾರ್ಗದರ್ಶಕರಾಗಿದ್ದರು.
ಇವರ ನಿಧನಕ್ಕೆ ಕುಲಶೇಖರ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ದಾಮೋದರ ಮತ್ತು ವೀರನಾರಾಯಣ ಸೇವಾ ಟ್ರಸ್ಟಿನ ಅಧ್ಯಕ್ಷ ಪ್ರೇಮಾನಂದ ಕುಲಾಲ್, ಕುಲಾಲ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕುಲಾಲ್ ಮತ್ತು ಇತರ ಗಣ್ಯರು ದುಖ: ಸಂತಾಪ ಸೂಚಿಸಿರುವರು.
Comments are closed.