ಕರಾವಳಿ

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರತಿ ಗುರುವಾರ ಮಕ್ಕಳಿಗೆ ಚುಚ್ಚು ಮದ್ದು ಇರುತ್ತದೆ : ಮೇಯರ್

Pinterest LinkedIn Tumblr

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಹಿಂದಿನಂತೆ ಪ್ರತಿ ಗುರುವಾರ ಮಕ್ಕಳಿಗಾಗಿ ತಮ್ಮ ತಮ್ಮ ವಯಸ್ಸಿಗೆ ಅನುಗುಣವಾಗಿ ನೀಡಲಾಗುತ್ತಿದ್ದ ವಿವಿಧ ರೀತಿಯ ರೋಗ ನಿರೋಧಕ ಚುಚ್ಚು ಮದ್ದನ್ನು ಇನ್ನು ಮುಂದಕ್ಕೂ ಕೂಡ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಾರದಪ್ರತೀ ಗುರುವಾರದಂದು ನೀಡಲಾಗುತ್ತದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟೆಯವರು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಕ್ಕಳಿಗೆ ರೋಗ ನಿರೋಧಕ ಚುಚ್ಚುಮದ್ದನ್ನು ಹಾಕಿಸಲು ಬರುವ ಹೆತ್ತವರು ಮತ್ತು ಪೋಷಕರುಗಳಿಗೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ಕಲ್ಪಿಸಬೇಕು.

ಪ್ರಸ್ತುತ ಕೆಲವೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋರೊನಾ ವ್ಯಾಕ್ಸಿನ್ ನೀಡುವಿಕೆಗೆ ಸ್ಥಳವಕಾಶ ಸಾಕಾಗದೇ ಲಸಿಕೆ ಕೇಂದ್ರಕ್ಕಾಗಿ ಪಯಾ೯ಯ ವ್ಯವಸ್ಥೆಯನ್ನು ಕಲ್ಪಿಸಲಾಗಿರುತ್ತದೆ. ಹಾಗೂ ಇನ್ನು ಆರೋಗ್ಯ ಕೇಂದ್ರದಲ್ಲಿ ಕೋರೊನಾ ಲಸಿಕೆ ನೀಡುತ್ತಿದ್ದರೆ ಮತ್ತು ಕೋರೊನಾ ಪರಿಕ್ಷೆಯನ್ನು ನಡೆಸುತ್ತಿದ್ದರೆ ಪ್ರತ್ಯೇಕ ಯಾ ವಿಭಿನ್ನ ಸ್ಥಳವನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇದರೊಂದಿಗೆ ಮಕ್ಕಳಿಗೆ ರೋಗ ನಿರೋಧಕ ಚುಚ್ಚು ಮದ್ದನ್ನು ಪಡೆಯಲು ಬರುವ ಸಾವ೯ಜನಿಕರಿಗೆ ಸೂಕ್ತ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವ್ಯವಸ್ಥೆ ಮತ್ತು ಸ್ಯಾನಿಟೈಸರ್ ಅನ್ನು ಒದಗಿಸಬೇಕು.

ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಯಾನಿಟೈಸೆಷನ್ ಗೆ ಒಳಪಡಿಸಿ ಶುಚಿತ್ವದಿಂದಿರಿಸಿ ಬರುವ ಹೆತ್ತವರಿಗೆ ಯಾ ಪೋಷಕರಿಗೆ ಯಾವುದೇ ರೀತಿಯ ಅಡಚಣೆ ಬಾರದಂತೆ ವ್ಯವಸ್ಥೆ ಮಾಡುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಿಗೆ ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಮೂರು ಸೌಲಭ್ಯವನ್ನು ಸಾವ೯ಜನಿಕರಿಗೆ ನೀಡುವಾಗ ಯಾವುದೇ ರೀತಿಯ ಲೋಪ ದೋಷಗಳು ಬಾರದಂತೆ ಕ್ರಮ ವಹಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಂದೀಪ್ ಗರೋಡಿ ಮತ್ತು ಜೆಪ್ಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ| ವಿದ್ಯಾ ಉಪ್ಪಸ್ಥಿತರಿದ್ದರು.

Comments are closed.