ಕರಾವಳಿ

ರಾಕ್ಣೊ ವಾರಪತ್ರಿಕೆಯ ಮಾಜಿ ಸಂಪಾದಕ ವಂ.ವಿನ್ಸೆಂಟ್ ವಿಕ್ಟರ್ ಮಿನೇಜಸ್ ವಿಧಿವಶ

Pinterest LinkedIn Tumblr

ಮಂಗಳೂರು : ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಗುರು ಹಾಗೂ ರಾಕ್ಣೊ ವಾರಪತ್ರಿಕೆ ಯ ಮಾಜಿ ಸಂಪಾದಕ ವಂ. ವಿನ್ಸೆಂಟ್ ವಿಕ್ಟರ್ ಮಿನೇಜಸ್ (75) ನಗರದ ಫಾ. ಮುಲ್ಲರ್ ಆಸ್ಪತ್ರೆಯಲ್ಲಿ 20-05-2021 ರಂದು ನಿಧನರಾದರು.

1945ರಲ್ಲಿ ವಾಲೆನ್ಶಿಯಾದಲ್ಲಿ ಜನಿಸಿದ ಅವರು 1974ರಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರುವಾಗಿ ದೀಕ್ಷೆ ಪಡೆದರು.

ಸಹಾಯಕ ಧರ್ಮಗುರುವಾಗಿ ಕಿರೆಂ ಮತ್ತು ಬಿಜಯ್ ನಲ್ಲೂ ಹಾಗೂ ನಾರಂಪಾಡಿ, ಪೆರ್ನಾಲ್, ಮಿಯಾರ್, ಕಾಸ್ಸಿಯಾ, ದೇರೆಬೈಲ್, ಪಾಲ್ದಾನೆ ಚರ್ಚುಗಳಲ್ಲಿ ಧರ್ಮಗುರುವಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರ ಅವರು ಜೆಪ್ಪುವಿನ ವಿಶ್ರಾಂತ ಧರ್ಮಗುರುಗಳ ನಿವಾಸದಲ್ಲಿ ವಾಸಿಸುತ್ತಿದ್ದರು.

ಕೊಂಕಣಿಯ ಹಿರಿಯ ಪತ್ರಿಕೆ ರಾಕ್ಣೊ ಇದರ ಸಂಪಾದಕರಾಗಿ (1985-93) ಹಲವಾರು ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಿದ್ದರು. ವಾಕಿಂಗ್ ಬೈಬಲ್ ಎಂಬ ಹೆಸರನ್ನು ಪಡೆದ ಅವರು ಬೈಬಲ್ ಅಧ್ಯಯನದ ಬಗ್ಗೆ ಹಲವಾರು ಪುಸ್ತಕಗಳನ್ನು, ಸಾಹಿತ್ಯವನ್ನು ರಚಿಸಿದ್ದಾರೆ.

ಅವರ ನಿಧನಕ್ಕೆ ಮಂಗಳೂರು ಧರ್ಮಾಧ್ಯಕ್ಷ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಧರ್ಮಗುರುಗಳು, ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತರು ಕಂಬನಿ ಮಿಡಿದಿದ್ದಾರೆ.

Rev Fr Vincent Victor Menezes

Native: Valencia

Father: Mr. Gregory Menezes

Mother: Magdalen Menezes

Date of Birth: 3 November 1945

Date of Ordination: 23 October 1974

· 1974 – 1977 Assistant Parish Priest Kirem

· 1977 – 1980 Assistant Parish Priest Bejai

· 1980 – 1983 Parish Priest Narampady

· 1983 – 1984 Journalism Studies Mumbai

· 1985 – 1993 Managing Editor – Raknno Bishop’s House

· 1993 – 2000 Parish Priest Pernal

· 2000 – 2007 Parish Priest Miyar

· 2007 – 2014 Parish Priest Cascia

· 2014 – 2016 Resident Bendur

· 2016 Parochial Administrator Derebail

· 2016 – 2019 Parish Priest Paldane

· 2019 – Retired St Zuze Vaz Home

Comments are closed.