
ಮಂಗಳೂರು / ಸುರತ್ಕಲ್ : ಕರಾವಳಿಯಲ್ಲಿ ತೌಕ್ತೆ ಚಂಡಮಾರುತ ಬೀಸುವ ಸಾಧ್ಯತೆಯಿದ್ದು, ಸುರತ್ಕಲ್, ಹೊಸಬೆಟ್ಟು,ಬೈಕಂಪಾಡಿ ಸಹಿತ ವಿವಿಧೆಡೆ ಕರಾವಳಿ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಭಾರೀ ಗಾಳಿ ಸಹಿತ ಮೋಡದ ವಾತಾವರಣವಿತ್ತು. ಸಮುದ್ರತೀರದಲ್ಲಿ ವಾಸಿಸುತ್ತಿರುವ ಮೀನುಗಾರರು ಆತಂಕದಿಂದ ಸಮುದ್ರ ದಂಡೆಯಲ್ಲಿ ನಿಂತು ಸಮುದ್ರದ ಅಬ್ಬರ ಕಂಡು ಸಮುದ್ರ ಕೊರೆತದ ಬಗ್ಗೆ ಭೀತಿ ವ್ಯಕ್ತ ಪಡಿಸಿದ್ದಾರೆ.
ಸಮುದ್ರತೀರಕ್ಕೆ ಶಾಸಕರು, ಮೇಯರ್, ಅಧಿಕಾರಿಗಳ ಭೇಟಿ:
ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಚಂಡಮಾರುತ ಬೀಸುವ ಸಾಧ್ಯತೆಯ ಹಿನ್ನಲೆಯಲ್ಲಿ ಅಧಿಕಾರಿ ಗಳೊಂದಿಗೆ, ಮೇಯರ್ ಪ್ರೇಮಾನಂದ ಶೆಟ್ಟಿ ಅವರೊಂದಿಗೆ ಸುರತ್ಕಲ್ ಗುಡ್ಡಕೊಪ್ಲ ಸಮುದ್ರತೀರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿ, ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅನಿವಾರ್ಯವಾದಲ್ಲಿ ಸ್ಥಳಾಂತರಕ್ಕೆ ಕ್ರಮ, ಮೆಡಿಕಲ್ ವ್ಯವಸ್ಥೆ, ಊಟೋಪಚಾರದ ಕುರಿತು ಸಮರ್ಪಕ ಕ್ರಮಕ್ಕೆ ಸೂಚನೆ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪಾಲಿಕೆ ಉಪಮೇಯರ್ ಸುಮಂಗಳ ರಾವ್, ಮಾಜಿ ಉಪಮೇಯರ್ ವೇದಾವತಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮನಪಾ ಸದಸ್ಯೆ ನಯನ ಆರ್.ಕೋಟ್ಯಾನ್, ವರುಣ್ ಚೌಟ, ಕಂದಾಯ ಅಧಿಕಾರಿ ನವೀನ್ ಮತ್ತಿತರರು ಉಪಸ್ಥಿತರಿದ್ದರು.
Comments are closed.