ಕರಾವಳಿ

ಪಂಪ್‌ವೆಲ್ ಫ್ಲೈಓವರ್‌ ಗೋಡೆ ಮೇಲೆ ಅಕ್ಷೇಪಾರ್ಹ ಬರಹ ಪತ್ತೆ : ಇಬ್ಬರು ವಿದ್ಯಾರ್ಥಿಗಳು ಪೊಲೀಸ್ ವಶ

Pinterest LinkedIn Tumblr

ಮಂಗಳೂರು, ಎಪ್ರಿಲ್..27 : ನಗರದ ಪಂಪ್‌ವೆಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಫ್ಲೈಓವರ್‌ನ ಗೋಡೆ ಮೇಲೆ ಅಕ್ಷೇಪಾರ್ಹ ಸಾಲುಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಲಾಗಿದೆ.

ಎಪ್ರಿಲ್ .20ರಂದು ಪಂಪ್‌ವೆಲ್‌ನ ಫ್ಲೈಓವರ್ ಗೋಡೆಯ ಮೇಲೆ “ಲಾಕ್‌ಡೌನ್ ನೀಡೆಡ್’ ಎಂದು ಇಂಗ್ಲಿಷ್‌ನಲ್ಲಿ ಬರೆದ ಬರಹದ ಬಳಿಯೇ ‘ಬ್ಯಾಡ್ ಬಾಯ್ಸಾ ಇನ್ ದ ಸಿಟಿ’ ಮತ್ತು ಅದರ ಮೇಲೆ ‘ಟೆಲ್ ಯುವರ್ ಮಾಮ್ ” ಎಂದು ಬರೆಯಲಾಗಿತ್ತು.

ಇವರು ನಗರದ ಕಾಲೇಜೊಂದರ ವಿದ್ಯಾರ್ಥಿಗಳು. ಲಾಕ್ ಡೌನ್ ಆದರೆ ಎಕ್ಸಾಮ್ ಮುಂದಕ್ಕೆ ಹೊಗುತ್ತದೆ ಎಂಬ ಉದ್ದೇಶದಿಂದ ಬರೆದಿದ್ದೇವೆ ಎಂಬುದಾಗಿ ಹೇಳಿದ್ದಾರೆ. ಇದರ ಹಿಂದೆ ಬೇರೆ ಯಾರಾದರೂ ಇದ್ಧಾರೆಯೆ ಎಂಬ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಈ ಹಿಂದೆ ನಗರದಲ್ಲಿ ಪತ್ತೆಯಾಗಿದ್ದ ಗೋಡೆ ಬರಹ ವಿಚಾರಗಳು ಸೂಕ್ಷ್ಮವಾಗಿದ್ದವು. ಹಾಗಾಗಿ ಈ ಪ್ರಕರಣವನ್ನು ಕೂಡ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಿಸಿಟಿವಿ ಫೂಟೇಜ್ ಆಧಾರದಲ್ಲಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಪಂಪ್‌ವೆಲ್ ನ ಫ್ಲೈಓವರ್‌ನ ಗೋಡೆ ಮೇಲೆ ಅಕ್ಷೇಪಾರ್ಹ ಸಾಲುಗಳನ್ನು ಬರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸಿಸಿ ಕ್ಯಾಮರಾದ ಆಧಾರದ ಮೇಲೆ ನಗರದ ಪ್ರಮುಖ ಕಾಲೇಜೊಂದರ ಇಬ್ಬರು ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

Comments are closed.