
ಮಂಗಳೂರು, ಎಪ್ರಿಲ್ 25 : ನಗರದ ಹೊರವಲಯದ ಎಮ್.ಎಸ್.ಇ.ಜೆಡ್ ವ್ಯಾಪ್ತಿಯಲ್ಲಿನ ರಾಸಾಯನಿಕ ಫ್ಯಾಕ್ಟ್ರಿಯಲ್ಲಿ ಬೆಂಕಿ ಅವಘಡ ಉಂಟಾದ ಸ್ಥಳಕ್ಕೆ ಜಿಲ್ಲಾ ಉಸ್ತುವರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲ್, ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಶಾಸಕ ಉಮಾನಾಥ ಎ. ಕೋಟ್ಯಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಸಚಿವರು ಮಾತನಾಡಿ ಮದ್ಯಾಹ್ನ ಸುಮಾರು 2.30ರ ಸಮಯದಲ್ಲಿ ನೂತನವಾಗಿ ನಿರ್ಮಾಣ ಹಂತದಲ್ಲಿರುವ ಬಜ್ಪೆ ಗ್ರಾಮದ ಎಮ್.ಎಸ್.ಇ.ಜೆಡ್ ಲಿಮಿಟೆಡ್ ಇಂಡಸ್ಟ್ರಿಯಲ್ ಫ್ಲಾಟ್ ನಂಬರ್ 42ಎ ಕ್ಯಾಟಸಿಂತ್ ಸ್ಪೆಷಾಲಿಟಿ ಕೆಮಿಕಲ್ಸ್ ಪ್ರೈವೆಟ್ ಲಿಮಿಟೆಡ್ ಫ್ಯಾಕ್ಟ್ರಿಯಲ್ಲಿನ ಟ್ಯಾಲಿನ್ ಎಂಬ ಕೆಮಿಕಲ್ಗೆ ಬೆಂಕಿ ಹತ್ತಿಕೊಂಡು ಭಾರೀ ಪ್ರಮಾಣದಲ್ಲಿ ಕಪ್ಪು ಹೊಗೆ ಕಂಡುಬಂದಿತ್ತು, ಇದಾದ ಸ್ವಲ್ಪ ಸಮಯದಲ್ಲಿಯೇ ಕರ್ನಾಟಕ ಅಗ್ನಿ ಶಾಮಕ ಸಿಬ್ಬಂದಿಯವರು ಹಾಗೂ ಎಮ್.ಎಸ್.ಇ.ಜೆಡ್ ವ್ಯಾಪ್ತಿಯಲ್ಲಿರುವ ಕೈಗಾರಿಕೆಗಳ ಅಗ್ನಿ ಶಾಮಕ ದಳದವರು ಜೊತೆಗೂಡಿ ಬೆಂಕಿ ನಂದಿಸುವ ಕಾರ್ಯವನ್ನು ಮಾಡಿ ಸಂಪೂರ್ಣವಾಗಿ ಅಗ್ನಿ ನಂದಿಸಿದ್ದಾರೆ ಎಂದರು.

ಕಫ್ರ್ಯೂ ಹಿನ್ನಲೆಯಲ್ಲಿ ಹೆಚ್ಚು ಕಾರ್ಮಿಕರು ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿರಲಿಲ್ಲ ಆದ ಕಾರಣ ಯಾರಿಗೂ ಸಹ ಪ್ರಾಣಪಾಯ ಮತ್ತಿತರ ಸಣ್ಣಪುಟ್ಟ ಗಾಯಗಳೂ ಆಗಿರುವುದು ಕಂಡುಬಂದಿಲ್ಲ ಎಂದ ಅವರು ಅಧಿಕಾರಿಗಳಿಗೆ ಅಗ್ನಿ ಅನಾಹುತಕ್ಕೆ ಸ್ಪಷ್ಟ ಕಾರಣವನ್ನು ತಿಳಿದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಪೋಲಿಸ್ ಕಮಿಷನರ್ ಎನ್ ಶಶಿಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಬಾಯ್ಲರ್ ಅಧಿಕಾರಿ ರಾಜೇಶ್ ಮಿಶ್ರ ಕೋಟಿ, ಎಮ್ ಆರ್ ಪಿ ಎಲ್ನ ಅಧಿಕಾರಿಗಳು, ಸಂಬಂಧ ಪಟ್ಟ ಕೈಗಾರಿಕೆಯ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Comments are closed.