ಕರಾವಳಿ

ಮಂಗಳೂರಿನಲ್ಲಿ ನಾಳೆ ಕೋವಿಡ್-19 ಲಸಿಕೆ ಅಭಿಯಾನ: ಆಧಾರ್ ಕಾರ್ಡ್‌ನೊಂದಿಗೆ ಬನ್ನಿ ಉಚಿತ ಲಸಿಕೆ ಪಡೆಯಿರಿ

Pinterest LinkedIn Tumblr

ಮಂಗಳೂರು, ಎಪ್ರಿಲ್.21 : ಜಿಲ್ಲಾ ವೈದ್ಯಕೀಯ ವಿಭಾಗ ಮತ್ತು ಶ್ರೀ ಗಾಯತ್ರಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ದೈವಜ್ಞ ಮಹಿಳಾ ಮಂಡಳಿ ಸಹಯೋಗದೊಂದಿಗೆ ಕೋವಿಡ್-19 ಲಸಿಕೆ ಅಭಿಯಾನ ಎಪ್ರಿಲ್ 22ರಂದು ಗುರುವಾರ ನಗರದ ಪಂಚಮಹಾಶಕ್ತಿ ಶ್ರೀ ಗಾಯತ್ರಿದೇವಿ, ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಜರಗಲಿರುವುದು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮಾತ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಮನಪಾ ಸದಸ್ಯರಾದ ಶ್ರೀಮತಿ ಜಯಶ್ರೀ ಜೆ.ಕುಡ್ವ ಹಾಗೂ ಶ್ರೀಮತಿ ಝೀನತ್ ಶಂಸುದ್ಧೀನ್ ಭಾಗವಹಿಸಲಿರುವರು. ಪಂಚಮಹಾಶಕ್ತಿ ಶ್ರೀ ಗಾಯತ್ರಿದೇವಿ, ಸಿದ್ಧಿವಿನಾಯಕ ದೇವಸ್ಥಾನದ ಮೊಕ್ತೇಸರರಾದ ರಮೇಶ್ ಶೇಟ್ ಉಪಸ್ಥಿತರಿರುವರು.

ಅಂದು ಬೆಳಿಗ್ಗೆ 9.30ರಿಂದ ಅಪರಾಹ್ನ 3.30ರವರೆಗೆ ಲಸಿಕೆ ಅಭಿಯಾನ ನಡೆಯಲಿದ್ದು, 45 ವರ್ಷ ಮೇಲ್ಪಟ್ಟವರು ಮಾತ್ರ ತಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಹಿತಾ ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮಂಗಳೂರಿನ ದೈವಜ್ಞ ಬ್ರಾಹ್ಮಣ ಸಂಘ, ದೈವಜ್ಞ ಮಹಿಳಾ ಮಂಡಳಿ, ದೈವಜ್ಞ ಯುವಕ ಮಂಡಳಿ, ದೈವಜ್ಞ ಚಿನ್ನ- ಬೆಳ್ಳಿ ಕೆಲಸಗಾರರ ಸಂಘ ಹಾಗೂ ಪಂಚಮಹಾಶಕ್ತಿ ಶ್ರೀ ಗಾಯತ್ರಿದೇವಿ, ಸಿದ್ಧಿವಿನಾಯಕ ಸೇವಾ ಸಮಿತಿ ಮನವಿ ಮಾಡಿದೆ.

Comments are closed.