
ಮಂಗಳೂರು: ಮಂಗಳೂರು ಸಹಿತಾ ಕರಾವಳಿಯಲ್ಲಿ ಸೋಮವಾರ ರಾತ್ರಿ ಸುರಿದ ಸಿಡಿಲಬ್ಬರದ ಭಾರಿ ಗಾಳಿ, ಮಳೆಗೆ ಜಿಲ್ಲೆಯ ಹಲವೆಡೆಗಳಲ್ಲಿ ಹಾನಿಯಾಗಿದೆ.
ಗಾಳಿಯ ರಭಸಕ್ಕೆ ಮಂಗಳೂರಿನ ದಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟ್ಗಳ ಹಗ್ಗ ತುಂಡಾಗಿದ್ದು, ಹಲವು ಬೋಟುಗಳು ಪಣಂಬೂರು, ಮೀನಕಳಿ, ಚಿತ್ರಪುರ, ಸುರತ್ಕಲ್, ಸಸಿಹಿತ್ಲು ಕಡಲ ತೀರಕ್ಕೆ ಬಂದು ನಿಂತಿವೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಗಾಳಿ, ಗುಡುಗು ಸಹಿತ ಭಾರೀ ಮಳೆ ಸುರಿದಿದೆ. ಜಿಲ್ಲೆಯಾದ್ಯಂತ ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಕೆಲವೆಡೆ ಮರ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಬಂಟ್ವಾಳದ ಬೆಂಜನಪದವಿನಲ್ಲಿ ವಿದ್ಯುತ್ ಕಂಬ ಉರುಳಿತ್ತು. ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ರಾತ್ರಿ ವಿದ್ಯುತ್ ಪೂರೈಕೆ ಸ್ಥಗಿತವಾಗಿತ್ತು.

ಸೋಮವಾರ ರಾತ್ರಿ ಸುರಿದ ಧಾರಾಕಾರ ಗಾಳಿ ಮಳೆಗೆ ಹಲವೆಡೆ ಮರ ಬಿದ್ದು ಸಂಚಾರ ಸಮಸ್ಯೆ ಎದುರಾಯಿತು. ಜತೆಗೆ ಭಾರೀ ಗಾಳಿಯ ಹಿನ್ನೆಲೆಯಲ್ಲಿ ಕೆಲವೆಡೆ ಮರದ ಕೊಂಬೆ ಬಿದ್ದು ಸಮಸ್ಯೆ ಉಂಟಾಯಿತು.
ದಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟ್ಗಳು ಚೆಲ್ಲಾಪಿಲ್ಲಿ: ಆಪಾರ ಹಾನಿ
ಸೋಮವಾರ ರಾತ್ರಿ ಸುರಿದ ಭಾರಿ ಗಾಳಿ, ಮಳೆಯಿಂದಾಗಿ ನಗರದ ಹಳೆಯ ಧಕ್ಕೆಯಲ್ಲಿ ಲಂಗರು ಹಾಕಿದ ಬೋಟುಗಳು ಒಂದೆಡೆಯಿಂದ ಇನ್ನೊಂದೆಡೆ ಚಲಿಸಿದ್ದು, ಇದರಿಂದ ಹಲವಾರು ಬೋಟ್ಗಳಿಗೆ ಹಾನಿಯಾಗಿದೆ.
ಗಾಳಿಯ ರಭಸಕ್ಕೆ ಮಂಗಳೂರಿನ ದಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟ್ಗಳ ಹಗ್ಗ ತುಂಡಾಗಿದ್ದು, ಹಲವು ಬೋಟುಗಳು ಪಣಂಬೂರು, ಮೀನಕಳಿ, ಚಿತ್ರಪುರ, ಸುರತ್ಕಲ್, ಸಸಿಹಿತ್ಲು ಕಡಲ ತೀರಕ್ಕೆ ಬಂದು ನಿಂತಿವೆ.
ಸೋಮವಾರ ರಾತ್ರಿ ಸುರಿದ ಭಾರಿ ಗಾಳಿ, ಮಳೆಯಿಂದಾಗಿ ನಗರದ ಹಳೆಯ ಧಕ್ಕೆಯಲ್ಲಿ ಲಂಗರು ಹಾಕಿದ ಬೋಟುಗಳು ಒಂದೆಡೆಯಿಂದ ಇನ್ನೊಂದೆಡೆ ಚಲಿಸಿದ್ದು, ಇದರಿಂದ ಹಲವಾರು ಬೋಟ್ಗಳಿಗೆ ಹಾನಿಯಾಗಿದೆ. ಇದರಿಂದ ಹಲವಾರು ಮಂದಿ ಮೀನುಗಾರರು ತುಂಬಾ ನಷ್ಟ ಅನುಭವಿಸಿದ್ದಾರೆ ಎಂದು ನಗರದ ಮತ್ಸ್ಯೊದ್ಯಮಿ 2 ಸ್ಟಾರ್ ಬೋಟ್ ಮಾಲ್ಹಕ ಅಜ್ಮಲ್ ಅವರು ತಿಳಿಸಿದ್ದಾರೆ.
Comments are closed.