ಬೆಂಗಳೂರು: ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಸಚಿವರದ್ದು ಎನ್ನಲಾದ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಸ್ತುತ ಸಂತ್ರಸ್ತ ಯುವತಿ ವಿಡಿಯೋ ರಿಲೀಸ್ ಮಾಡಿದ್ದು ಜಾರಕಿಹೊಳಿ ವಿರುದ್ದ ಆರೋಪಿಸಿದ್ದಾಳೆ.

‘ಈ ವಿಡಿಯೋ ಹೇಗೆ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಕೆಲಸ ಕೊಡಿಸುವುದಾಗಿ ನನಗೆ ರಮೇಶ್ ಜಾರಕಿಹೊಳಿ ವಂಚಿಸಿದ್ದಾರೆ. ನಂತರದಲ್ಲಿ ವಿಡಿಯೋವನ್ನು ಅವರೇ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಇದೀಗ ಮನೆಯ ಬಳಿಗೆ ತುಂಬಾ ಜನರು ಬಂದು ಹೋಗುತ್ತಿದ್ದಾರೆ. ನನ್ನ ಮಾನ, ಮರ್ಯಾದೆ ಎಲ್ಲಾ ಹೋಗಿದೆ. ನನ್ನ ತಂದೆ, ತಾಯಿ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದೇನೆ. ನನಗೆ ಯಾವುದೇ ರಾಜಕಾರಣಿಗಳ ಬೆಂಬಲವೂ ಇಲ್ಲ. ನನಗೆ, ನನ್ನ ಕುಟುಂಬಕ್ಕೆ ರಕ್ಷಣೆ ನೀಡಿ ಎಂದು ಗೃಹಸಚಿವರಿಗೆ ಮನವಿ ಮಾಡಿಕೊಂಡಿದ್ದಾಳೆ.

ರಮೇಶ್ ಜಾರಕಿಹೊಳಿ ನೀಡಿದ ದೂರಿನ ಬೆನ್ನಲ್ಲೇ ಎಫ್ಐಆರ್ ದಾಖಲಾಗಿದ್ದು ಇಷ್ಟು ದಿನ ಯಾವುದೇ ಪ್ರತಿಕ್ರಿಯೆ ಸಿಗದ ಸಂತ್ರಸ್ತ ಯುವತಿಯ ಸ್ಪೋಟಕ ಹೇಳಿಕೆಯಿಂದಾಗಿ ಪ್ರಕರಣ ಮತ್ತೊಂದು ತಿರುವು ಪಡೆದಿದೆ.
Comments are closed.