
ಮಂಗಳೂರು, ಮಾರ್ಚ್.13: ಹಿರಿಯರು ಮಾತ್ರವಲ್ಲದೇ ಇಂದಿನ ಯುವ ಜನತೆ ಕೂಡ ಹೆಚ್ಚು ಹೆಚ್ಚು ತುಳು ಭಾಷೆಯ ಸಿನಿಮಾಗಳನ್ನು ನೋಡುವ ಮೂಲಕ ತುಳು ಭಾಷೆಯ ಸಿನಿಮಾಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ದುಬೈಯ ಖ್ಯಾತಿ ಉದ್ಯಮಿ, ಕನ್ನಡ, ತುಳು ಚಿತ್ರನಿರ್ಮಾಪಕ ಶ್ರೀ ಹರೀಶ್ ಶೇರಿಗಾರ್ ಹೇಳಿದರು.

ಅವರು ನಗರದ ಸೈಂಟ್ ಸೆಬಾಷ್ಟಿಯನ್ ಸಭಾಂಗಣದಲ್ಲಿ ಇಂದು ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ಸರ್ವ ಕಾಲೇಜ್ ವಿದ್ಯಾರ್ಥಿ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಹಲವಾರು ಇತರ ಭಾಷೆಯ ಚಿತ್ರಗಳನ್ನು ನೋಡುತ್ತಾರೆ. ಆದರೆ ತುಳು ಚಿತ್ರ ನೋಡುವುದು ಕಡಿಮೆಯಾಗಿದೆ. ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ ಹಾಗು ಇತರ ಚಟುವಟಿಕೆಗಳ ಜೊತೆಗೆ ತುಳು ಭಾಷೆಯ ಚಿತ್ರಗಳನ್ನು ಬೆಂಬಲಿಸಬೇಕು, ಹಾಗಾದಾಗ ಮಾತ್ರ ತುಳು ಭಾಷೆಯ ಚಿತ್ರಗಳು ಕರ್ನಾಟಕ ಹಾಗೂ ಇತರೆಡೆಗಳಲ್ಲಿ ಮತ್ತಷ್ಟು ಖ್ಯಾತಿ ಹೊಂದಲು ಸಾಧ್ಯ ಎಂದು ಶೇರಿಗಾರ್ ಅಭಿಪ್ರಾಯಪಟ್ಟರು.

ತಾನು ಈಗಾಗಲೇ ಮೂರು ಕನ್ನಡ ಚಿತ್ರಗಳನ್ನು ನಿರ್ಮಿಸಿದ್ದು, ಮೂರೂ ಸಿನಿಮಾವೂ ಅಧ್ಬುತ ಯಶಸ್ಸು ಪಡೆದಿದೆ. ಇದೀಗ ನಮ್ಮ ಮಾತೃ ಭಾಷೆಗೆ ಗೌರವ ಕೊಡುವ ನಿಟ್ಟಿನಲ್ಲಿ ಮೊದಲ ಬಾರಿಗೆ “ಪಿಲಿಬೈಲ್ ಯಮುನಕ್ಕ” ಖ್ಯಾತಿಯ ಸೂರಜ್ ಶೆಟ್ಟಿ ನಿರ್ದೇಶನದಲ್ಲಿ “ಇಂಗ್ಲೀಷ್” ಎಂಕ್ಲೇಗೆ ಬರ್ಪುಜಿ ಬ್ರೋ ಎಂಬ ಹೆಸರಿನ ತುಳು ಚಿತ್ರವನ್ನು ನಿರ್ಮಿಸಿದ್ದು, ಈ ಚಿತ್ರ ಮಾರ್ಚ್ 26ರಂದು ದ.ಕ.ಜಿಲ್ಲೆ, ಉಡುಪಿ ಜಿಲ್ಲೆ ಹಾಗೂ ಕರ್ನಾಟಕದಾದ್ಯಂತ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಳ್ಳಲ್ಲಿದೆ.
ತಾವೇಲ್ಲರೂ ಚಿತ್ರವನ್ನು ವೀಕ್ಷಿಸುವ ಮೂಲಕ ಚಿತ್ರಕ್ಕೆ ಬೆಂಬಲ ನೀಡಬೇಕು. ಮಾತ್ರವಲ್ಲದೇ ಕುಟುಂಬ ಸಮೇತಾ ನೋಡುವಂತಹ ಒಂದು ಉತ್ತಮ ಚಿತ್ರವನ್ನು ನೀಡಿದಂತಹ ನಮ್ಮ ತಂಡವನ್ನು ಆಶೀರ್ವದಿಸಬೇಕು ಎಂದು ಹರೀಶ್ ಶೇರಿಗಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಮಿತ್ ರೈ ಸರ್ವ ಕಾಲೇಜ್ ವಿದ್ಯಾರ್ಥಿ ಸಂಘಟನೆಯ ನಾಯಕನಾಗಿ ಅಯ್ಕೆಯಾದರು. ಇತರ ಕಾಲೇಜುಗಳ ಸುಮಾರು 50 ಮಂದಿ ಪದಾಧಿಕಾರಿಗಳನಾಗಿ ಅಯ್ಕೆ ಮಾಡಲಾಯಿತು.

ಸಮಾರಂಭದಲ್ಲಿ ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಜೆ.ಆರ್.ಲೋಬೊ, ಎಂಎಲ್‌ಸಿ ಹರೀಶ್ ಕುಮಾರ್, ದ.ಕ.ಜಿಲ್ಲಾ ಕಾಂಗ್ರೆಸ್ ನ ಮಾಜಿ ಯೂತ್ ಅಧ್ಯಕ್ಷ ಮಿಥುನ್ ರೈ ಮುಂತಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಎ.ಸಿ.ವಿನಯರಾಜ್, ಅನಿಲ್ ಕುಮಾರ್ ಹಾಗೂ ಎನ್ ಎಸ್ ಯುಐನ ಸ್ವಾದ್ ಸುಳ್ಯ ಮುಂತಾದವರು ಉಪಸ್ಥಿತರಿದ್ದರು.
Comments are closed.