ಬೆಂಗಳೂರು : 2020-21 ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಸ್‌ಎಲ್ ಪರೀಕ್ಷೆ ಜೂ.21 ರಿಂದ ಜು.5 ವರೆಗೂ ನಡೆಸಲು ಸರ್ಕಾರ ತೀರ್ಮಾನಿಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶಕುಮಾರ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳಿಗೆ ಆಹ್ವಾನಿಸಲಾಗಿತ್ತು. ಇದೀಗ ಜೂ.21ರಿಂದ ಅಧಿಕೃತವಾಗಿ ಪರೀಕ್ಷೆ ಆರಂಭಗೊಳ್ಳಲಿವೆ ಎಂದು ಹೇಳಿದರು.
ಜೂನ್ 21- ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ,
ಜೂ. 24 -ಗಣಿತ,
ಜೂ. 28 -ವಿಜ್ಞಾನ,
ಜೂ. 30-ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೆಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು,
ಜು. 2 – ದ್ವಿತೀಯ ಭಾಷೆ ಇಂಗ್ಲಿಷ್/ ಕನ್ನಡ,
ಜು.5 – ಸಮಾಜ ವಿಜ್ಞಾನ

ಮಕ್ಕಳ ಮಾನಸಿಕ ಒತ್ತಡವನ್ನು ಹೆಚ್ಚಿಸದಂತೆ ಮತ್ತು ಆತಂಕಗೊಳ್ಳದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಹೊಣೆ ಸರ್ಕಾರ ಮತ್ತು ಅಧಿಕಾರಿಗಳದ್ದಾಗಿದೆ. ಕೋವಿಡ್-19 ನಿಂದಾಗಿ ಕಲಿಕೆಯಲ್ಲಿ ಉಳಿಕೆಯಾಯಿತು ಎನ್ನುವ ಭಯ ಮಕ್ಕಳಲ್ಲಿ ಬರದಂತೆ ಅವರಿಗೆ ವಿಷಯವನ್ನು ಬೋಧಿಸಲಾಗುವುದು ಎಂದು ಸಚಿವ ಸುರೇಶಕುಮಾರ್ ಹೇಳಿದರು.
ಮಾ.1 ರಿಂದ ಆರಂಭಗೊಳ್ಳಬೇಕಿದ್ದ ಕಿರಿಯ ಪ್ರಾಥಮಿಕ ಶಾಲೆಗಳನ್ನು ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇನ್ನು ಒಂದು ವಾರ ಕಾದು ನೋಡಿ ಆರಂಭಿಸಲಾಗುವುದು. ಕೇಂದ್ರದ ಒಪ್ಪಿಗೆ ಸಿಕ್ಕ ನಂತರ ಮಧ್ಯಾಹ್ನದ ಬಿಸಿಯೂಟ ಆರಂಭಿಸಲಾಗುವುದು ಎಂದು ಸಚಿವ ಸುರೇಶಕುಮಾರ್ ಹೇಳಿದ್ದಾರೆ.
Comments are closed.