ಬೆಂಗಳೂರು: ಭಾನುವಾರವಷ್ಟೇ ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿ ಶುರುವಾಗಿದ್ದು ಎಲ್ಲಾ ಸ್ಪರ್ಧಿಗಳು ಮನೆಗೆ ಪ್ರವೇಶಿಸಿದ್ದಾರೆ. ಇದರ ನಡುವೆ ರಾಜಕಾರಣಿಯೊಬ್ಬರು ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತು ಕೇಳಿ ಬಂದಿದ್ದು ಅವರು ಕೂಡ ಅವಕಾಶ ಸಿಕ್ಕರೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಪ್ರಭಾವಿ ರಾಜಕಾರಣಿ ಇರುತ್ತಾರೆ ಎಂಬ ಮಾತು ಮೊದಲಿಗೆ ಕೇಳಿಬಂದಿದ್ದು ಅದರಂತೆ ಈ ಬಾರಿ ಮಾಜಿ ಸಚಿವ ಹಳ್ಳಿಹಕ್ಕಿ ಎಚ್. ವಿಶ್ವನಾಥ್ ಹೋಗುತ್ತಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಎಚ್.ವಿಶ್ವನಾಥ್ ನನಗೆ ಈ ಹಿಂದಿಯೇ ಕರೆ ಬಂದಿತ್ತು. ಪರಮೇಶ್ವರ್ ಗುಂಡುಕ್ಕಲ್ ನನ್ನ ಸ್ನೇಹಿತರಾಗಿದ್ದು ಬಿಗ್ ಬಾಸ್ 6ನೇ ಆವೃತ್ತಿಗೆ ನನ್ನನ್ನು ಆಹ್ವಾನಿಸಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದ ನಾನು ಹೋಗಿರಲಿಲ್ಲ. ಈ ಬಾರಿ ವಿಶೇಷ ಆಹ್ವಾನಿತನಾಗಿ ಸಮಯ ಹಾಗೂ ಅವಕಾಶ ಸಿಕ್ಕರೆ ನಾಲ್ಕೈದು ದಿನ ಹೋಗಲು ಸಿದ್ಧ ಎಂದು ಹೇಳಿದ್ದಾರೆ.
ರಾಜಕಾರಣದ ಬಗ್ಗೆ ಯುವ ಜನರಿಗೆ ಶಿಕ್ಷಣ ಕೊಡಬೇಕಿದೆ. ಬಿಗ್ ಬಾಸ್ ಮನೆಗೆ ಹೋದರೆ ಅಲ್ಲಿನ ಯುವ ಜನತೆಗೆ ರಾಜಕೀಯ ಪಾಠ ಹೇಳಿಕೊಡುತ್ತೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.
Comments are closed.