
ಮಂಗಳೂರು : ಸಂತ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರೊಫೆಸರ್ ಕೆರೊಲಿನಾ ಜೆನೆಫರ್ ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಕೆರೊಲಿನಾ ಬರೆದಿರುವ ‘ಕಸ್ಟಮರ್ ಪ್ರೊಟೆಕ್ಷನ್ ಇನ್ ಬ್ಯಾಂಕಿಂಗ್ ಸೆಕ್ಟರ್ ಇನ್ ದಿ ಇರಾ ಆಫ್ ಗ್ಲೋಬಲೈಸೇಶನ್ – ಓ ಸ್ಟಡಿ ಇನ್ ದಿ ಕೋಸ್ಟಲ್ ಡಿಸ್ಟ್ರಿಕ್ಟ್ಸ್ ಆಫ್ ದಿ ಕರ್ನಾಟಕ’ (ಜಾಗತೀಕರಣದ ಯುಗದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಹಕರ ರಕ್ಷಣೆ- ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಒಂದು ಅಧ್ಯಯನ) ಎಂಬ ಪ್ರಬಂಧಕ್ಕೆ ಪಿಎಚ್‌ಡಿ ಪವಿ ಲಭಿಸಿದೆ.
ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರೊಫೆಸರ್ ಡಾ. ಅಬೂಬಕರ್ ಸಿದ್ದೀಕಿ ಮಾರ್ಗದರ್ಶನದಲ್ಲಿ ಅವರು ಈ ಪ್ರಬಂಧವನ್ನು ಮಂಡಿಸಿದ್ದಾರೆ.
ಕೆರೊಲಿನಾ ಜೆನಿಫರ್‌ರವರು ವಾಲ್ಟರ್ ಜಯಕುಮಾರ್ ಮತ್ತು ಕ್ಲೆಮೆಂಟಿನಾ ಪ್ರಭಾವತಿ ದಂಪತಿಯ ಪುತ್ರಿ ಹಾಗೂ ಮಧುಸೂಧನ್ ಶೆಟ್ಟಿ ಜಪ್ಪಿನಮೊಗರು ಅವರ ಪತ್ನಿ.
Comments are closed.