ಕರಾವಳಿ

ಗಂಗೊಳ್ಳಿಯಲ್ಲಿ ಬೋಟಿನಿಂದ ಸಮುದ್ರಕ್ಕೆ ಬಿದ್ದಿದ್ದ ಮೀನುಗಾರನ ಶವ ಪತ್ತೆ

Pinterest LinkedIn Tumblr

ಕುಂದಾಪುರ: ಎರಡು ದಿನದ ಹಿಂದೆ ಬೋಟಿನಿಂದ ಸಮುದ್ರಕ್ಕೆ ಬಿದ್ದಿದ್ದ ಮೀನುಗಾರನ ಶವ ಆತ ಬಿದ್ದ ಸ್ಥಳದಲ್ಲಿಯೇ ಇಂದು ಪತ್ತೆಯಾಗಿದೆ.

ಸಂಜಿತ್ ಡುಂಗ್‌ಡುಂಗ್ (35 ವರ್ಷ) ಮೃತ ಮೀನುಗಾರ.

ಉಪ್ಪುಂದದ ನಾಗರಾಜ ಖಾರ್ವಿ ಎನ್ನುವರಿಗೆ ಸೇರಿದ ಬಫ್ರಿಹಿಂಡ್ ಪ್ರಸಾದ್ ಎಂಬ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಸಂಜಿತ್ ಜ.1 ರಂದು ಬೋಟಿನಲ್ಲಿ ಸಹ ಕಾರ್ಮಿಕರಾದ ಸಂಜಯ ನಾಯಕ್, ಶಾಹಿಲ್, ಸುರೇಶ, ಶುಕ್ರ, ರಾಮಕೃಷ್ಣ ಎಂಬವರ ಜೊತೆಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗಿ ಮೀನುಗಾರಿಕೆ ಮುಗಿಸಿ ಸಂಜೆ ಗಂಗೊಳ್ಳಿ ಬಂದರಿಗೆ ಬಂದು ಮೀನು ಖಾಲಿ ಮಾಡಿ, ಬೋಟನ್ನು ಗಂಗೊಳ್ಳಿ ಮ್ಯಾಂಗನೀಸ್ ರಸ್ತೆಯಲ್ಲಿ ಬೋಟ್ ಯಾರ್ಡ್ ನಲ್ಲಿ ನಿಲ್ಲಿಸಲು ಹೋದಾಗ ರಾತ್ರಿ ಸುಮಾರು 8:30 ಗಂಟೆಗೆ ಬೋಟ್ ಯಾರ್ಡ್ ಒಳಗಡೆ ಹೋಗುವಾಗ ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಸಂಜಿತ್ ಡುಂಗ್‌ಡುಂಗ್ ಆಕಸ್ಮಿಕವಾಗಿ ಕಾಲು ಜಾರಿ ಪಂಚಗಂಗಾವಳಿ ಹೊಳೆಗೆ ಬಿದ್ದು ಕಾಣೆಯಾಗಿದ್ದು ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಭಾನುವಾರ ಸಂಜಿತ್ ಮೃತದೇಹ ಪತ್ತೆಯಾಗಿದ್ದು ಅದನ್ನು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Comments are closed.