
ಶಶಿಕುಮಾರ್, ವಿಕಾಸ್ ಕುಮಾರ್, ಹೇಮಂತ್ ನಿಂಬಾಳ್ಕರ್, ಡಿ.ರೂಪಾ.
ಮಂಗಳೂರು, ಜನವರಿ.01: ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ, ಹೇಮಂತ್ ನಿಂಬಾಳ್ಕರ್ ಹಾಗೂ ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ಸೇರಿದಂತೆ ಹಲವು ಮಂದಿ ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿ ಆದೇಶಿಸಿದೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿರುವ ವಿಕಾಸ್ ಕುಮಾರ್ ಅವರನ್ನು ವರ್ಗಾಯಿಸಲಾಗಿದ್ದು, ವಿಕಾಸ್ ಕುಮಾರ್ ಮಂಗಳೂರು ಪೊಲೀಸ್ ಕಮೀಷನರ್ ಆಗಿ ಒಂದು ವರ್ಷ ಪೂರೈಸುವ ಮೊದಲೇ ಅವರ ವರ್ಗಾವಣೆಯಾಗಿದೆ.

ಮಂಗಳೂರಿನ ನೂತನ ಕಮಿಷನರ್ ಶಶಿಕುಮಾರ್
ಮಂಗಳೂರಿನ ನೂತನ ಕಮಿಷನರ್ ಆಗಿ ಬೆಂಗಳೂರಿನ ಶಶಿಕುಮಾರ್ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಮಾಡಿದೆ. ಎನ್.ಶಶಿಕುಮಾರ್ ಅವರು ಚಿತ್ರದುರ್ಗ ಮೂಲದವರಾಗಿದ್ದು, 2007ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಬಿಎಸ್ಸಿ ಕೃಷಿ ಪದವೀಧರರಾದ ಇವರು ಈ ಹಿಂದೆ ಬೆಂಗಳೂರು ಉತ್ತರ ಡಿಸಿಪಿ ಆಗಿ, ವೈರ್ಲೆಸ್ ವಿಭಾಗದ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ವಿಕಾಸ್ ಕುಮಾರ್ 2020ರ ಜೂ.29ರಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದು, 6 ತಿಂಗಳಲ್ಲೇ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಡಿಐಜಿ ಆಗಿ ವರ್ಗಾಯಿಸಲಾಗಿದೆ.
ಮಾನವ ಹಕ್ಕುಗಳ ಆಯೋಗದ ಎಡಿಜಿಪಿ ಕೆ.ರಾಮಚಂದ್ರರಾವ್ ಅವರನ್ನು ಗ್ರೇವಿಯನ್ಸ್ ಮತ್ತು ಹ್ಯೂಮನ್ ರೈಟ್ಸ್ ನ ಎಡಿಜಿಪಿಯಾಗಿ ವರ್ಗಾವಣೆ ಮಾಡಿದೆ. ಗ್ರೇವಿಯೆನ್ಸ್ ಅಂಡ್ ಹ್ಯೂಮನ್ ರೈಟ್ಸ್ ಎಡಿಜಿಪಿಯಾಗಿದ್ದ ಮಾಲಿನಿ ಕೃಷ್ಣಮೂರ್ತಿಯವರನ್ನು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಡಿ.ರೂಪಾ ಅವರ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ.
ಡಿ.ರೂಪಾ ಅವರನ್ನು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ವರ್ಗಾವಣೆ ಮಾಡಿದೆ. ರೂಪಾ ಜೊತೆಗೆ ಐಜಿಪಿ ಹಾಗೂ ಎಸಿಪಿ ಆಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಐಎಸ್ಡಿಯ ಐಜಿಪಿಯಾಗಿ ವರ್ಗಾವಣೆ ಮಾಡಿದೆ. ಎಸಿಬಿಯ ಐಜಿಪಿಯ ಚಂದ್ರಶೇಖರ್ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಐಜಿಪಿಯಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ಮೈಸೂರು ವಿಭಾಗದ ಐಜಿಪಿ ವಿಪುಲ್ ಕುಮಾರ್ ಅವರನ್ನು ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡಮಿಯ ಐಜಿಪಿ ಮತ್ತು ಡೈರೆಕ್ಟರ್ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಲಾಗಿದೆ.
ಸೀಮಂತ್ ಕುಮಾರ್ (1996 ಬ್ಯಾಚ್) ಐಜಿಪಿ ಬೆಂಗಳೂರು ಸೆಂಟ್ರಲ್ ರೇಂಜ್ ನಿಂದ ಬಡ್ತಿ ನೀಡಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ), ಬೆಂಗಳೂರು ಎಡಿಜಿಪಿಯಾಗಿ ವರ್ಗವಣೆಗೊಳಿಸಲಾಗಿದೆ.
ವಾರ್ತಿಕಾ ಕಟಿಯಾರ್ (2010 ಬ್ಯಾಚ್) ರಾಜ್ಯ ಕ್ರಿಮಿನಲ್ ರೆಕಾರ್ಡ್ ಬ್ಯುರೋ ಎಸ್ಪಿ, ಬೆಂಗಳೂರು. ಡಾ. ಪಿ ರವೀಂದ್ರ ನಾಥ್ (1989 ಬ್ಯಾಚ್) ಎಡಿಜಿಪಿ ಅರಣ್ಯ ಘಟಕ ಹುದ್ದೆಯಿಂದ ಬಡ್ತಿ ನೀದಿ ಡಿಜಿಪಿ, ಮಾನವ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಗೊಳಿಸಲಾಗಿದೆ.
ಮಂಗಳೂರಿನಲ್ಲೂ ಹಲವು ಬದಲಾವಣೆ :
ವಿಕಾಸ್ ಕುಮಾರ್ ಅವರ ವರ್ಗಾವಣೆ ಬೆನ್ನಲ್ಲೇ ಮಂಗಳೂರಿನ ಕೆಲವು ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಕುಂದಾಪುರ ಉಪವಿಭಾಗದ ಎಎಸ್ಪಿಯಾಗಿದ್ದ ಹರಿರಾಮ್ ಶಂಕರ್ ಅವರನ್ನು ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತರಾಗಿ ನಿಯುಕ್ತಿಗೊಳಿಸಲಾಗಿದೆ.
ಮಂಗಳೂರು ನಗರ ಡಿಸಿಪಿಯಾಗಿದ್ದ ಅರುಣಾಂಶುಗಿರಿ ಅವರ ವರ್ಗಾವಣೆ ಬಳಿಕ ಹರಿರಾಮ್ ಶಂಕರ್ ಪ್ರಭಾರ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಆಗಿದ್ದ ಐಪಿಎಸ್ ಅಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರನ್ನು ಭಟ್ಕಳ ಉಪವಿಭಾಗದ ಎಎಸ್ಪಿ ಆಗಿ ನಿಯುಕ್ತಿಗೊಳಿಸಲಾಗಿದೆ.
Comments are closed.