
ಜೈಪುರ: ತನ್ನ ಮಡದಿಗೆ ಇಲ್ಲೊಬ್ಬ ಮಹಾಶಯ ಚಂದ್ರನಂಗಳದ ಮೂರು ಎಕರೆ ಭೂಮಿ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ!
ಹೌದು, ರಾಜಸ್ಥಾನದ ಅಜ್ಮೇರ್ನ ಧರ್ಮೇಂದ್ರ ಅನಿಜಾ ಅವರು ತನ್ನ 8ನೇ ವಿವಾಹ ವಾಷಿರ್ಕೋತ್ಸವದ ಪ್ರಯಕ್ತ ಪ್ರೀತಿಯ ಪತ್ನಿ ಸಪ್ನಾಗಾಗಿ ಚಂದ್ರನಂಗಳದ ಮೂರು ಎಕರೆ ಭೂಮಿ ಖರೀದಿಸಿದ್ದಾರೆ.
ಇದೇ ಡಿಸೆಂಬರ್ 24ರಂದು ವಿವಾಹ ವಾಷಿರ್ಕೋತ್ಸವ ನಡೆದಿದ್ದು, ಚಂದ್ರನ ಮೇಲೆ ಜಾಗ ಖರೀದಿಸಿದ ಪತ್ರಗಳನ್ನು ಪತ್ನಿ ಸಪ್ನಾಗೆ ಧರ್ಮೇಂದ್ರ ಅನಿಜಾ ಹಸ್ತಾಂತರಿಸಿದ್ದಾರೆ. ಸಪ್ನಾಗೆ ಏನಾದರೂ ವಿಶೇಷವಾದದ್ದನ್ನು ನೀಡಲು ಬಯಸಿದ್ದೆ. ಹೀಗಾಗಿ ಚಂದ್ರನಲ್ಲಿ 3 ಎಕರೆ ಭೂಮಿ ಖರೀದಿಸಿ ನೀಡಿದ್ದೇನೆ ಎಂದು ಧರ್ಮೇಂದ್ರ ಅನಿಜಾ ತಿಳಿಸಿದ್ದಾರೆ. ಲೂನಾ ಸೊಸೈಟಿ ಇಂಟರ್ನ್ಯಾಷನಲ್ ಮೂಲಕ ಭೂಮಿ ಖರೀದಿಸಿದ್ದಾರೆ.
ಇತ್ತೀಚೆಗೆ ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಿಂಗ್ ಕೂಡ 2018ರಲ್ಲಿ ಚಂದ್ರನ ಮೇಲೆ ಜಾಗ ಖರೀದಿಸಿದ್ದಾಗಿ ಹೇಳಿಕೊಂಡಿದ್ದರು. ಬೋಧ್ ಗಯಾ ನಿವಾಸಿ ನೀರಜ್ ಕುಮಾರ್ ಎಂಬುವವರೂ ಕೆಲ ತಿಂಗಳ ಹಿಂದೆ ತಮ್ಮ ಜನ್ಮದಿನದ ನಿಮಿತ್ತ ಚಂದ್ರನಲ್ಲಿ 1 ಎಕರೆ ಜಾಗ ಖರೀದಿಸಿ ಸುದ್ದಿಯಾಗಿದ್ದರು.
Comments are closed.