ರಾಷ್ಟ್ರೀಯ

ವಯಸ್ಕ ಹೆಣ್ಣು ಮಗಳು ಸ್ವ ಇಚ್ಚೆಯಿಂದ ‘ಮತಾಂತರʼವಾದರೆ ಹಸ್ತಕ್ಷೇಪ ಮಾಡುವಂತಿಲ್ಲ: ಕೋಲ್ಕತ್ತಾ ಹೈಕೋರ್ಟ್

Pinterest LinkedIn Tumblr


ಕೋಲ್ಕತ್ತಾ: ವಯಸ್ಕ ಹೆಣ್ಣು ಮಗಳು ತನ್ನ ಇಚ್ಛೆಯಂತೆ ಮದುವೆಯಾಗಿ ಮತಾಂತರಗೊಂಡರೆ ಯಾರೂ ಹಸ್ತಕ್ಷೇಪ ಮಾಡಿ ತಡೆಯುವಂತಿಲ್ಲ ಎಂದು ಕೋಲ್ಕತ್ತಾ ಹೈಕೋರ್ಟ್ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಸಂಜಿಬ್ ಬ್ಯಾನರ್ಜಿ ಮತ್ತು ಅರಿಜಿತ್ ಬ್ಯಾನರ್ಜಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, 19 ವರ್ಷದ ಯುವತಿ ಅನ್ಯಧರ್ಮೀಯ ಯುವಕನನ್ನ ಪ್ರೀತಿಸಿ ವಿವಾಹವಾಗಿದ್ದಳು. ನಂತರ ಆಕೆಯ ತಂದೆ ಕೋಲ್ಕತ್ತಾ ಹೈಕೋರ್ಟ್ʼಗೆ ಅರ್ಜಿ ಸಲ್ಲಿಸಿ, ಅನ್ಯ ಧರ್ಮದ ವ್ಯಕ್ತಿ ತಮ್ಮ ಮಗಳ ಮೇಲೆ ಪ್ರಭಾವ ಬೀರಿ ಮದುವೆಯಾಗಿದ್ದಾನೆ. ಹಾಗಾಗಿ ತನ್ನ ಮಗಳ ಹೇಳಿಕೆಯನ್ನೂ ಕೂಡ ಮ್ಯಾಜಿಸ್ಟ್ರೇಟರ ಮುಂದೆ ದಾಖಲು ಮಾಡಿಕೊಳ್ಳಲು ಕೂಡ ಬಿಡಲಿಲ್ಲ ಎಂದು ಆರೋಪಿಸಿದ್ದರು.

ಆದ್ರೆ, ಪೊಲೀಸರು ಯುವತಿಯನ್ನ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದಾಗ ಆಕೆ ತನ್ನ ಇಷ್ಟದ ಪ್ರಕಾರವೇ ಮದುವೆಯಾಗಿರುವುದಾಗಿ ತಿಳಿಸಿದಳು. ವಯಸ್ಕ ಹೆಣ್ಣುಮಗಳು ಆಕೆಯ ಆಯ್ಕೆ ಪ್ರಕಾರ ಮದುವೆಯಾಗಿ ಪತಿಯ ಧರ್ಮಕ್ಕೆ ಮತಾಂತರವಾಗಲು ಬಯಸಿದರೆ ಮತ್ತು ತನ್ನ ತಾಯಿಯ ಮನೆಗೆ ಹಿಂತಿರುಗಲು ಮನಸ್ಸು ತೋರದಿದ್ದರೆ ಆಕೆಯ ನಿರ್ಧಾರವನ್ನು ತಡೆಯಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

Comments are closed.