ಬೆಂಗಳೂರು: ರಾಜ್ಯ ಸರಕಾರ ಆದೇಶಿಸಿದ ರಾತ್ರಿ ಕರ್ಫ್ಯೂ ವಿಚಾರದಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ಕಾಮೆಡಿ ಬರಹಗಳು ಟ್ರೋಲ್ ಆಗುತ್ತಿದೆ. ಯಾವ ಪುರುಷಾರ್ಥಕ್ಕೆ ರಾತ್ರಿ ಕರ್ಫ್ಯೂ ಆದೇಶ..? ಎಂದು ನೆಟ್ಟಿಗರು ಕಾಮೆಡಿ ಪಂಚ್ ಮೂಲಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬುಧವಾರ ಮಧ್ಯಾಹ್ನದ ಸುಮಾರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಬುಧವಾರ ರಾತ್ರಿ 10 ರಿಂದ ಬೆಳಿಗ್ಗೆ 6 ತನಕ 9 ದಿನ ನೈಟ್ ಕರ್ಫ್ಯೂ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಪರ-ವಿರೋಧ ಠೀಕೆ ವ್ಯಕ್ತವಾದ ಹಿನ್ನೆಲೆ ಮರು ಆದೇಶ ನೀಡಿದ್ದು ರಾತ್ರಿ 10 ರ ಬದಲಿಗೆ 11ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಕರ್ಫ್ಯೂ ಜಾರಿಗೊಳಿಸಿ ಪರಿಷ್ಕೃತ ಆದೇಶ ನೀಡಲಾಗಿದೆ. ಅಲ್ಲದೆ ಕ್ರಿಸ್ಮಸ್ ಆಚರಣೆಗೂ ಯಾವುದೇ ಅಡ್ಡಿಯಾಗದಂತೆ ಸಿಎಂ ಬಿ.ಎಸ್.ವೈ ಸರಕಾರ ಜಾಣ ನಡೆ ಪ್ರದರ್ಶಿಸಿದೆ. ಇನ್ನು 2021 ಹೊಸವರ್ಷಕ್ಕೆ ಸಾರ್ವಜನಿಕವಾಗಿ ಪಾರ್ಟಿ ಮಾಡುವುದರ ಮೇಲೆ ಸರ್ಕಾರ ನಿರ್ಬಂಧ ವಿಧಿಸಿದೆ. ಕ್ಲಬ್-ಪಬ್-ರೆಸ್ಟೋರೆಂಟ್ ತೆರೆಯಬಹುದಾದರೂ ಕೂಡ ಕ್ಲಬ್-ಪಬ್-ರೆಸ್ಟೋರೆಂಟ್‌ನಲ್ಲಿ ನ್ಯೂಇಯರ್ ಪಾರ್ಟಿಗೆ ನಿಷೇಧ ಇರಲಿದೆ.
ಇದೆಲ್ಲಾ ಆದೇಶಗಳನ್ನು ಕಂಡ ಜನ ಅಸಮಾಧಾನ ಹೊರಹಾಕಿದ್ದು ಜಾಲತಾಣದಲ್ಲಿ ತರಹೇವಾರಿ ಠೀಕೆಗಳು ಬರುತ್ತಿದೆ. ರಾತ್ರಿ ವೇಳೆ ಕರ್ಫ್ಯೂ ಜಾರಿಮಾಡಿದ ಉದ್ದೇಶವಾದರೂ ಏನು ಎಂಬುದು ಕೆಲವು ಜನರ ಪ್ರಶ್ನೆಯಾದರೆ ರಾತ್ರಿ ಇರುವ ಕೊರೋನಾ ವೈರಸ್ ಹಗಲಿನಲ್ಲಿ ಏನು ಮಾಡುತ್ತಿರುತ್ತೆ ಎನ್ನುವುದು ನೆಟ್ಟಿಗರ ಸದ್ಯದ ಪ್ರಶ್ನೆಯಾಗಿದೆ.
(ಚಿತ್ರ ಕೃಪೆ- ಸೋಶಿಯಲ್ ಮಿಡಿಯಾ)
Comments are closed.