ರಾಷ್ಟ್ರೀಯ

ನನ್ನನ್ನು ಯಾರೂ ಖರೀದಿ ಮಾಡಲು ಸಾಧ್ಯವಿಲ್ಲ. ಮುಸ್ಲಿಂ ಮತದಾರರೇನು ನಿಮ್ಮ ಆಸ್ತಿ ಅಲ್ಲ ಮಮತಾ ಬ್ಯಾನರ್ಜಿಗೆ ಓವೈಸಿ ತಿರುಗೇಟು

Pinterest LinkedIn Tumblr


ಹೈದರಾಬಾದ್​: ನನ್ನನ್ನು ಯಾರೂ ಖರೀದಿ ಮಾಡಲು ಸಾಧ್ಯವಿಲ್ಲ. ಮುಸ್ಲಿಂ ಮತದಾರರೇನು ನಿಮ್ಮ ಆಸ್ತಿ ಅಲ್ಲ ಎಂದು ಅಸಾದುದ್ದೀನ್​ ಓವೈಸಿಯು ಮಮತಾ ಬ್ಯಾನರ್ಜಿ ಅವರಿಗೆ ಹೇಳಿದ್ದಾರೆ.

ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಲು, ಬಿಜೆಪಿಗೆ ಹೈದರಾಬಾದ್ ಮೂಲದ ಪಕ್ಷವೊಂದು ಸಹಾಯ ಮಾಡುತ್ತದೆ. ಬಿಜೆಪಿ ಆ ಪಕ್ಷಕ್ಕೆ ಹಣದ ಹೊಳೆಯನ್ನೇ ಹರಿಸುತ್ತದೆ ಎಂದು ಮಮತಾ ಬ್ಯಾನರ್ಜಿ ಅವರು ಇತ್ತೀಚೆಗೆ ಹೇಳಿದ್ದರು. ಈ ಮಾತಿನಿಂದಾಗಿ ಸಿಟ್ಟಿಗೆದ್ದಿರುವ ಓವೈಸಿ, ಮಮತಾ ಅವರ ವಿರುದ್ಧ ಕಿಡಿ ಕಾರಿದ್ದಾರೆ. ‘ನನ್ನನ್ನು ಮತ್ತು ನನ್ನ ಪಕ್ಷವನ್ನು ಹಣದಿಂದ ಖರೀದಿ ಮಾಡಲು ಪೂರ್ತಿ ವಿಶ್ವದಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಅಂತಹ ವ್ಯಕ್ತಿ ಈವರೆಗೂ ಹುಟ್ಟಿಲ್ಲ, ಮುಂದೆ ಹುಟ್ಟುವುದೂ ಇಲ್ಲ. ಮಮತಾ ಅವರು ಇದುವರೆಗೆ ಮಿರ್​ ಜಾಫರ್ಸ್ ಮತ್ತು ಸಾದಿಕ್‌ಗಳೊಂದಿಗೆ ಮಾತ್ರ ವ್ಯವಹರಿಸಿದ್ದಾರೆ. ತಮಗಾಗಿ ಯೋಚಿಸುವ ಮತ್ತು ಮಾತನಾಡುವ ಮುಸ್ಲಿಮರನ್ನು ಅವರು ಇಷ್ಟಪಡುವುದಿಲ್ಲ. ಅವರು ಬಿಹಾರದ ಮತದಾರರನ್ನು ಅವಮಾನಿಸಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

ಮುಸ್ಲಿಂ ಮತದಾರರು ನಿಮ್ಮ ಆಸ್ತಿಯಲ್ಲ. ಈ ರೀತಿ ಮತ ವಿಭಜಿಸಲು ಬಂದವರಿಗೆ ಯಾವ ಪರಿಸ್ಥಿತಿ ಬಂದಿದೆ ಎನ್ನುವುದನ್ನು ನೀವು ನೆನಪಿನಲ್ಲಿಟ್ಟುಕೊಳ್ಳಿ. ಮೊದಲು ನಿಮ್ಮ ಪಕ್ಷವನ್ನು ಭದ್ರವಾಗಿಟ್ಟುಕೊಳ್ಳಿ ಎಂದು ಓವೈಸಿ, ಮಮತಾ ಅವರಿಗೆ ಹೇಳಿದ್ದಾರೆ.

Comments are closed.