
ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಸ್ನ್ಯಾಪ್‌ಚಾಟ್ ಅಥವಾ ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣದಲ್ಲಿ ದೈನಂದಿನ ಬಳಕೆಯು ಖಿನ್ನತೆಗೆ ಕಾರಣವಾಗುತ್ತದೆ ಎಂದು ಹಲವು ವೈಜ್ಞಾನಿಕ ಸಂಶೋಧನೆಗಳು ದೃಢಪಡಿಸಿವೆ.
ಯುಎಸ್ ಸಂಶೋಧನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಸಮಯ ಮತ್ತು ಖಿನ್ನತೆಯ ಅಪಾಯದ ನಡುವಿನ ಸಂಬಂಧವನ್ನು ಸೂಚಿಸುತ್ತಾ ಎಚ್ಚರಿಕೆ ನೀಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಮಯವನ್ನು ಕಳೆಯುವ ವಿಶೇಷವಾಗಿ ಕಿರಿಯ ವಯಸ್ಸಿನ ಬಳಕೆದಾರರಲ್ಲಿನ ಖಿನ್ನತೆಯ ಕುರಿತು ವಿಜ್ಞಾನಿಗಳು ತನಿಖೆ ಮಾಡುತ್ತಿರುವುದು ಇದೇ ಮೊದಲೇನಲ್ಲ. ಆದಾಗ್ಯೂ, ಹಿಂದಿನ ಅಧ್ಯಯನಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಖಿನ್ನತೆಯೇ ಕಾರಣವೋ ಅಥವಾ ಸಾಮಾಜಿಕ ಮಾಧ್ಯಮವು ಖಿನ್ನತೆಯ ಲಕ್ಷಣಗಳಿಗೆ ಕಾರಣವೋ? ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ.
ದಿನಕ್ಕೆ ಎರಡು ಗಂಟೆಗಳಿಗಿಂತ ಹೆಚ್ಚು ಬಳಕೆ ಅಪಾಯಕಾರಿ:
ಸೋಶಿಯಲ್ ಮೀಡಿಯಾವನ್ನು ಬಳಸಿಕೊಂಡು ದಿನಕ್ಕೆ ಐದು ಗಂಟೆಗಳಿಗಿಂತ ಹೆಚ್ಚು ಸಮಯ ಕಳೆಯುವ ಯುವಕರು ಆರು ತಿಂಗಳಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆ 2.8 ಪಟ್ಟು ಹೆಚ್ಚಾಗಿದೆ ಎಂದು ವಿಜ್ಞಾನಿಗಳು ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದಾರೆ. ಸಾಮಾಜಿಕ ನೆಟ್ವರ್ಕ್ಗಳನ್ನು ದಿನಕ್ಕೆ ಎರಡು ಗಂಟೆಗಳಿಗಿಂತ ಕಡಿಮೆ ಕಾಲ ಬಳಸಿದವರಿಗಿಂತ ಇವರಲ್ಲಿ ಖಿನ್ನತೆ ಹೆಚ್ಚಾಗಿ ಕಂಡುಬಂದಿದೆ.
ಈ ಸಂಶೋಧನೆಯಿಂದ ಮತ್ತೂ ಹಲವು ವಿಚಾರಗಳು ಬಯಲಾಗಿದೆ. ಮೊದಲನೆಯದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ವ್ಯಕ್ತಿಗತ ಸಂಬಂಧಗಳನ್ನು ರೂಪಿಸಲು, ವೈಯಕ್ತಿಕ ಅಥವಾ ವೃತ್ತಿಪರ ಗುರಿಗಳನ್ನು ಸಾಧಿಸಲು ಅಥವಾ ವೈಯಕ್ತಿಕ ಪ್ರತಿಬಿಂಬದ ಅಮೂಲ್ಯವಾದ ಕ್ಷಣಗಳು ಅನವಶ್ಯಕವಾಗಿ ವ್ಯರ್ಥವಾಗುತ್ತಿದೆ. ಇದಿರಿಂದ ವ್ಯಕ್ತಿಯ ಸ್ವಾಭಿಮಾನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಅಂಶವನ್ನು ಸಂಶೋಧನೆ ತಿಳಿಸಿದೆ.
Comments are closed.