ಬೆಂಗಳೂರು: ಸ್ಯಾಂಡಲ್ ವುಡ್, ಕನ್ನಡ ಕಿರುತೆರೆ ಕಲಾವಿದ ಪ್ರೇಮ ಬರಹ ಖ್ಯಾತಿಯ ಸಿನಿಮಾ ನಾಯಕ ನಟ ಚಂದನ್ ಕುಮಾರ್ ನಟನೆಯ ಜೊತೆಗೆ ಹೋಟೆಲ್ ಉದ್ಯಮವನ್ನು ಕೂಡ ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮ್ಮ ದೊನ್ನೆ ಬಿರಿಯಾನಿ ಹೋಟೆಲ್ ನ 6 ನೇ ಬ್ರಾಂಚ್ ಉದ್ಘಾಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ನಟ ಚಂದನ್ ಕುಮಾರ್ ಅವರ ದೊನ್ನೆ ಬಿರಿಯಾನಿ ಹೋಟೆಲ್ ನ 6 ನೇ ಬ್ರಾಂಚ್ ಭಾನುವಾರ ಉದ್ಘಾಟನೆಗೊಂಡಿದೆ. ಈ ಹೊಸ ಬ್ರಾಂಚ್ ನ ಉದ್ಘಾಟನೆಯನ್ನು ನಟ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ಅವರು ನೆರವೇರಿಸಿ ಚಂದನ್ ಅವರಿಗೆ ಶುಭ ಹಾರೈಸಿದ್ದಾರೆ.
ಚಂದನ್ ಅವರ ಈ ಹೊಸ ಹೋಟೆಲ್ ಉದ್ಘಾಟನೆಗೆ ಕನ್ನಡದ ಜನಪ್ರಿಯ ನಟಿ ಶ್ರುತಿ ಹಾಗೂ ಅವರ ಪುತ್ರಿ ಆಗಮಿಸಿದ್ದರು. ಉದ್ಘಾಟನೆಯ ನಂತರ ಶಿವರಾಜ್ ಕುಮಾರ್ ಅವರು ಹೋಟೆಲ್ನಲ್ಲಿ ಬಿರಿಯಾನಿಯನ್ನು ಸವಿದರು. ಅಲ್ಲದೇ ಬಿರಿಯಾನಿ ಮಾಡುವ ಚಿಕ್ಕ ಯತ್ನವನ್ನು ಮಾಡಿದರು.
Comments are closed.