ರಾಷ್ಟ್ರೀಯ

ಚಿಕ್ಕ ವಯಸ್ಸಿನಲ್ಲಿ ನೀನು ದಡ್ಡ, ದುರ್ಬಲ ಎಂದು ಬೈದಿದ್ದಕ್ಕೆ ದೊಡ್ಡವನಾದ ಮೇಲೆ ಸರಣಿ ಕೊಲೆ:  ಈತನ ಪತ್ತೆಗೆ 3,000 ಸಿಸಿಟಿವಿ ಪರಿಶೀಲನೆ

Pinterest LinkedIn Tumblr


ನವದೆಹಲಿ: ಚಿಕ್ಕ ವಯಸ್ಸಿನಲ್ಲಿ ಆತನನ್ನು ನೀನು ದಡ್ಡ, ದುರ್ಬಲ ಎಂದಿದ್ದಕ್ಕೆ ದೊಡ್ಡವನಾದ ಮೇಲೆ ಮೂರು ದಿನದಲ್ಲಿ ಮೂರು ಕೊಲೆ ಕೊಲೆ ಮಾಡಿದ್ದಾನೆ.

ಹೌದು, ಬಿಹಾರ ಮೂಲದ ಮೊಹಮ್ಮದ್ ರಾಜಿ ಎಂಬಾತ ನವೆಂಬರ್ 23, 24 ಮತ್ತು 25 ರಂದು ಮೂರು ಜನರನ್ನು ಕೊಂದಿದ್ದಾನೆ. ನವೆಂಬರ್ 23 ರಂದು ಗುರುಗ್ರಾಮದ ಲೀಜರ್ ವ್ಯಾಲಿ ಪಾರ್ಕ್ನಲ್ಲಿ ವ್ಯಕ್ತಿಯೊಬ್ಬನನ್ನು ಇರಿದು ಕೊಂದಿದ್ದಾನೆ. 24 ರಂದು ಗುರುಗ್ರಾಮ್ನ ಸೆಕ್ಟರ್ 40ರಲ್ಲಿ ಸೆಕ್ಯುರಿಟಿ ಗಾರ್ಡ್ನನ್ನು ಕೊಲೆ ಮಾಡಿದ್ದಾನೆ. ಹಾಗೆಯೇ ಮಾರನೇ ದಿನ 25 ರಂದು ವ್ಯಕ್ತಿಯೊಬ್ಬನ ತಲೆ ಕಡಿದು ಹತ್ಯೆಗೈದಿದ್ದಾನೆ. ಹತ್ಯೆಯಾದ ಮೂರನೇ ವ್ಯಕ್ತಿಯ ಶವ ಚರಂಡಿಯಲ್ಲಿ ಪತ್ತೆಯಾಗಿತ್ತು.

ಹೀಗೆ ಸರಣಿ ಕೊಲೆ ಮಾಡುತ್ತಿದ್ದವನ ಪತ್ತೆಗೆ ಪೊಲೀಸರು ಬಲೆ ಬೀಸಿ, ಸರಿಸುಮಾರು 3,000 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದಾರೆ. ನಂತರ ಆರೋಪಿಯ ಸುಳಿವು ಸಿಕ್ಕಿ, ಗುರುಗ್ರಾಮದ ಐಎಫ್ಸಿ ಏಫ್ ಸಿಒ ಚೌಕ್ ಸಮೀಪ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ತನಿಖೆಯ ವೇಳೆ, ನಾನು ಚಿಕ್ಕವನಿದ್ದಾಗ ಏನು ತಿಳಿಯುತ್ತಿರಲಿಲ್ಲ. ನನ್ನ ಪಾಲಕರು ಸೇರಿದಂತೆ ಎಲ್ಲರೂ ನನ್ನನ್ನು ಹಂಗಿಸುತ್ತಿದ್ದರು. ನೀನು ದಡ್ಡ, ನಿನಗೇನೂ ಬರಲ್ಲ. ನೀನು ತುಂಬಾ ದುರ್ಬಲ, ನಿನ್ನಿಂದ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ಇದ್ದರು. ಇದು ನನ್ನ ತಲೆಯಲ್ಲಿ ತುಂಬಿಕೊಂಡಿತ್ತು. ನಾನೂ ಏನಾದರೂ ಮಾಡಬಲ್ಲೆ ಎಂದು ತೋರಿಸುವ ಹುಚ್ಚು ಹತ್ತಿತ್ತು. ಅದಕ್ಕಾಗಿಯೇ ಹೀಗೆ ಮಾಡಿದೆ. ಅವರ್ಯಾರು ಎಂದು ನನಗೆ ತಿಳಿದೇ ಇಲ್ಲ. ಆದರೆ ಅದೆಷ್ಟು ಖುಷಿ ಆಗ್ತಿದೆ ಎಂದರೆ ನನ್ನ ಜೀವನ ಸಾರ್ಥಕವಾಯ್ತು ಎನಿಸುತ್ತೆ. ಈಗ ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ನನ್ನ ಉದ್ದೇಶ ಈಡೇರಿದೆ, ಈಗ ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿದ್ದಾನೆ.

Comments are closed.