
ಲಾಕ್ ಡೌನ್ – ಅನ್ ಲಾಕ್ ಆಯ್ತು, ಇದೆ ಗ್ಯಾಫ್ ನಲ್ಲಿ ಜನ ಸ್ವಲ್ಪ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಆದ್ರು ಎಲ್ಲರಿಗೂ ಇನ್ನು ಕೊರೋನಾ ಎರಡನೇ ಅಲೆ ಆತಂಕವು ಸಹ ಕಾಡ್ತಿದೆ. ಇದರ ಬೆನ್ನಲ್ಲೆ ವಿಶ್ವ ಆರೋಗ್ಯ ಸಂಸ್ಥೆ ವರದಿ ಜನರನ್ನ ಬೆಚ್ಚಿ ಬಿಳಿಸ್ತಾಯಿದೆ. WHO ವರದಿ ಪ್ರಕಾರ ಹುಕ್ಕಾ ಮತ್ತು ತಂಬಾಕು ಸೇವನೆ ಮಾಡಿದ್ರೆ ಕೊರೋನಾ ಬರುತ್ತೆ ಅನ್ನೋದು ಫಿಕ್ಸ್ ಆಗಿದೆ. ಅನ್ ಲಾಕ್ ಬಳಿಕ ಎಲ್ಲಾ ಪಬ್ ಬಾರ್ ಗಳು ರೀ ಒಪನ್ ಆಗಿವೆ. ಹಾಗಂತ ಕೊರೊನಾ ಮರೆತು ತಂಬಾಕು ಮತ್ತು ಹುಕ್ಕಾ ಸೇವಿನೆ ಮಾಡುವ ಮುನ್ನ ನೀವು ಎಚ್ಚರ..
ಹೌದು WHO ವರದಿ ಪ್ರಕಾರ ಹುಕ್ಕಾ ಮತ್ತು ತಂಬಾಕು ಸೇವನೆ ಮಾಡುವವರ ಲಂಗ್ಸ್ ವೀಕ್ ಆಗಿರುತ್ತೆ. ಲಂಗ್ಸ್ ಮೇಲೆ ಯಾವುದೇ ವೈರಸ್ ಅಟ್ಯಾಕ್ ಮಾಡಬಹುದು. ಎಲ್ಲ ರೀತಿಯ ವೈರಸ್ ಹರಡಲು ಈ ಹುಕ್ಕಾವೇ ಕಾರಣವಾಗುತ್ತೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ನಡೆಸಿ, ರಿಪೋರ್ಟ್ ನೀಡಿದೆ. ಹುಕ್ಕಾ ಸೇವಿಸುವಾಗ ವಾಟರ್ ಪೈಪ್ ಬಳಕೆ ಬಹಳ ಡೇಂಜರ್. ಈ ವಾಟರ್ ಪೈಪ್ ಕ್ಲಿನ್ ಮಾಡೋದು ತುಂಬಾ ಕಷ್ಟ. ಹುಕ್ಕಾ ತಂಬಾಕಿನಿಂದ ಉಸಿರಾಟ, ಹೃದಯದ ರಕ್ತನಾಳಕ್ಕೆ ಕಂಟಕ ಪ್ರಾಯವಾಗುತ್ತೆ. ಕೊರೋನಾ ಮಾತ್ರವಲ್ಲ ಬೇರೆಯ ವೈರಸ್ಗಳು ನಿಮ್ಮ ಲಂಗ್ಸ್ ಮೇಲೆ ಅಟ್ಯಾಕ್ ಮಾಡುವುದ ಜೊತೆ ನಿಮೋನಿಯಾ ಕೂಡ ಕಾನಿಸಿಕೊಳ್ಳುತ್ತೆ.
ಹುಕ್ಕಾ ಶೇರ್ ಮಾಡೋದ್ರಿಂದ್ ವೈರಸ್ ಹರಡುತ್ತಂತೆ ಹಾಗೇ ನಿಮ್ಮ ಪಕ್ಕದಲ್ಲಿ ಇರುವವರು ಸ್ಮೋಕ್ ಮಾಡಿದ್ರು ನಿಮ್ಗೆ ಅಪಾಯ ಗ್ಯಾರೆಂಟಿ. ಸ್ಮೋಕರ್ಸ್ ರಿಂದಲೇ ಕೊರೋನಾ ಹರಡುವುದು ಫಿಕ್ಸ್. ತಂಬಾಕು ಸೇವನೆ ವೇರಿ ಡೇಂಜರ್. ಅದರಂತೆ ಸ್ಮೋಕ್ ಮಾಡುವವರ ಪಕ್ಕದಲ್ಲಿ ನೀವು ಇದ್ರೆ ಅದು ನಿಮ್ಗೆ ವೆರಿ ವೆರಿ ಡೇಂಜರ್. ಹುಕ್ಕಾ ಸೇವನೆಯಿಂದ ಲಂಗ್ಸ್ ವಿಕ್ ಆಗುತ್ತೆ ಜೊತೆಗೆ ಟಾಕ್ಸಿಕ್ ಕೇಮಿಕಲ್ ಶ್ವಾಸಕೋಶವನ್ನು ಸಂಪೂರ್ಣವಾಗಿ ಹಾಳು ಮಾಡುತ್ತೆ ಅಂತ ತಜ್ಞ ವೈದ್ಯರು ಹೇಳುತ್ತಾರೆ.
ತಂಬಾಕು ಮತ್ತೆ ಹುಕ್ಕಾ ಸೇವಿಸೋವ್ರು ಮಾತ್ರವಲ್ಲ ಅವರ ಅಕ್ಕ ಪಕ್ಕದಲ್ಲಿರುವವರು ಹುಷಾರಾಗಿರಬೇಕಿದೆ. ಕೊರೋನಾ ಯಾವ್ ರೂಪದಲ್ಲಾದ್ರು ನಮ್ಮ ದೇಹ ಸೇರುವ ಸಾಧ್ಯತೆ ಇದೆ.
Comments are closed.