ಕರ್ನಾಟಕ

ಐಸಿಸ್ ಉಗ್ರಗಾಮಿ ಸಂಘಟನೆ‌ ಹಾಗೂ ಸಿದ್ದರಾಮಯ್ಯ ಮನಸ್ಥಿತಿ ಎರಡೂ ಒಂದೇ: ಬಿಜೆಪಿ

Pinterest LinkedIn Tumblr


ಬೆಂಗಳೂರು : ಐಸಿಸ್ ಉಗ್ರಗಾಮಿ ಸಂಘಟನೆ‌ ಹಾಗೂ ಸಿದ್ದರಾಮಯ್ಯ ಅವರ ಮನಸ್ಥಿತಿ ಎರಡೂ ಒಂದೇ ಎಂದು ಬಿಜೆಪಿ ಹೇಳಿದೆ.

ಟ್ವಿಟರ್ ನಲ್ಲಿ ಈ ಕುರಿತು ಟ್ವೀಟ್ ಮಾಡಿದ ಬಿಜೆಪಿ ಇಸ್ಲಾಮಿಕ್‌ ಸ್ಟೇಟ್‌ಗಾಗಿ ಐಸಿಸ್‌, ಮುಸ್ಲಿಂ ಸಮುದಾಯದ ಹೆಸರು ಬಳಸಿಕೊಳ್ಳುತ್ತಿದೆ. ಅದರಂತೆ ಸಿದ್ದರಾಮಯ್ಯ ಅವರು ತಮ್ಮ ಮೈಲೇಜ್‌ಗಾಗಿ ಮುಸ್ಲಿಂ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ. ಇವರಿಬ್ಬರಿಂದಲೂ ಅವಮಾನವಾಗುತ್ತಿರುವುದು ಮುಸ್ಲಿಂ ಸಮುದಾಯಕ್ಕೆ ಮಾತ್ರ! ಎಂದು ಟ್ವೀಟ್ ಮಾಡಿದೆ.

ಸಿದ್ದರಾಮಯ್ಯನವರೇ ʼದೊಡ್ಡ ಆಲದ ಮರ ಬಿದ್ದಾಗ ನೆಲ ಕಂಪಿಸುವುದು ಸಹಜʼ ಈ ಮಾತುಗಳನ್ನು ಒಮ್ಮೆ ನೆನಪಿಸಿಕೊಳ್ಳಿ! ಇಂದಿರಾ ಗಾಂಧಿ ಹತ್ಯೆಯ ಬಳಿಕ 84ರಲ್ಲಿ ನಡೆದ ಸಿಖ್‌ ಹತ್ಯಾಕಾಂಡದ ಕುರಿತು ರಾಜೀವ್‌ ಗಾಂಧಿ ನೀಡಿದ್ದ ಹೇಳಿಕೆಯಿದು.

ಅಂದು ಸಿಖ್‌ ಸಮುದಾಯವನ್ನು ಅಟ್ಟಾಡಿಸಿ ಕೊಂದ ಕಾಂಗ್ರೆಸ್‌ ಇಂದು ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಚಾಟಿ ಬೀಸಿದೆ.

Comments are closed.