ರಾಷ್ಟ್ರೀಯ

ಅಂತರ್‌ ಧರ್ಮೀಯ ವಿವಾಹಕ್ಕೆ ಪ್ರೋತ್ಸಾಹ ನೀಡುವ ಯೋಜನೆ ರದ್ಧತಿಗೆ ಚಿಂತನೆ

Pinterest LinkedIn Tumblr


ಲಕ್ನೋ: ಲವ್‌ ಜಿಹಾದ್‌ ನಿಯಂತ್ರಣಕ್ಕೆ ಸುಗ್ರಿವಾಜ್ಞೆ ಜಾರಿಗೊಳಿಸಿದ ಬಳಿಕ ಉತ್ತರ ಪ್ರದೇಶ ಸರ್ಕಾರ ಮತ್ತೊಂದು ಕ್ರಮ ಕೈಗೊಳ್ಳಲಿದೆ.

ಅಂತರ್‌ ಧರ್ಮೀಯ ವಿವಾಹಕ್ಕೆ ಪ್ರೋತ್ಸಾಹ ನೀಡುವ ಯೋಜನೆ ರದ್ದು ಮಾಡಲು ತೀರ್ಮಾನಿಸಿದೆ. 44 ವರ್ಷಗಳಿಂದ ಅದು ಜಾರಿಯಲ್ಲಿದೆ. 1976ರಿಂದ ಅಂತರ್ಜಾತಿ ಮತ್ತು ಅಂತರ್‌ ಧರ್ಮೀಯ ವಿವಾಹವಾಗುವವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಂದಿನ ಸರ್ಕಾರ ಜಾರಿಗೊಳಿಸಿತ್ತು.

ಉತ್ತರ ಪ್ರದೇಶ ಸರ್ಕಾರದ ರಾಷ್ಟ್ರೀಯ ಏಕತೆಯ ವಿಭಾಗ ಅದನ್ನು ಜಾರಿಗೊಳಿಸಿತ್ತು. ಕಳೆದ ವರ್ಷ 11 ಮಂದಿ ಅಂತರ್‌ ಧರ್ಮೀಯ ಮತ್ತು ಅಂತರ್‌ ಜಾತಿಯ ವಿವಾಹವಾಗಿದ್ದರು. ಅವರಿಗೆ ತಲಾ 50 ಸಾವಿರ ರೂ. ಪ್ರೋತ್ಸಾಹಕ ಧನ ನೀಡಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸಕ್ತ ವರ್ಷ ನಾಲ್ಕು ಅರ್ಜಿಗಳು ಸಲ್ಲಿಕೆಯಾಗಿದ್ದರೂ, ಅದಕ್ಕೆ ಮೊತ್ತ ಬಿಡುಗಡೆ ಮಾಡಿಲ್ಲ. ಈ ನಿಯಮದ ವ್ಯಾಪ್ತಿಯಲ್ಲಿ ಮದುವೆಯಾದವರು ಮತಾಂತರಗೊಳ್ಳುವಂತಿಲ್ಲ. ಒಂದು ವೇಳೆ ಆ ರೀತಿ ಏನಾದರೂ ಆದರೆ ನಿಯಮದ ಅನ್ವಯ ಪ್ರೋತ್ಸಾಹ ಧನ ಪಡೆಯುವುದರಿಂತ ವಂಚಿತರಾಗುತ್ತಾರೆ ಎಂದು 2017ರಲ್ಲಿ ರಾಜ್ಯ ಸರ್ಕಾರ ತಿದ್ದುಪಡಿ ತಂದಿತ್ತು. ಉತ್ತರಾಖಂಡ ಸರ್ಕಾರ ಕೂಡ ಅಂಥ ನಿಯಮ ರದ್ದು ಮಾಡಲು ತೀರ್ಮಾನಿಸಿದೆ.

Comments are closed.