
ಬಿಹಾರ ಮೂಲದ ಸಿತಾರಾ ಪ್ರವೀಣ್ ಎನ್ನುವ ಹುಡುಗಿ ‘ಇಂಡಿಯನ್ ಐಡಲ್’ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದಾರೆ. ವಿಶಿಷ್ಟವಾದ ಧ್ವನಿಯ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿರುವ ಸಿತಾರಾಗೆ ಎಲ್ಲರ ಮುಂದೆ ತನ್ನ ಪ್ರತಿಭೆಯನ್ನು ಹೊರಹಾಕಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು.
ಈ ಹಾಡಿನ ರಿಯಾಲಿಟಿ ಶೋನ ಎಪಿಸೋಡ್ ಒಂದರಲ್ಲಿ ಮುಸ್ಲಿಂ ಸಮಾಜ ಹಾಡಲು ಬಿಡಲಿಲ್ಲ, ಕನಸನ್ನು ಈಡೇರಿಸಿಕೊಳ್ಳಲು ಅನುವು ಮಾಡಿಕೊಡಲಿಲ್ಲ ಎಂದು ಸಿತಾರಾ ಅವರೇ ಹೇಳಿದ್ದಾರೆ. 5ನೇ ವರ್ಷದಲ್ಲಿದ್ದಾಗಲೇ ಸಿತಾರಾ ಹಾಡುತ್ತಿದ್ದರಂತೆ. ಆದರೆ ಸಂಗೀತ ಕಲಿಯುವುದೇ ಅವರಿಗೆ ದೊಡ್ಡ ಕಷ್ಟವಾಗಿತ್ತು. ಚಿಕ್ಕ ಕುಟುಂಬದಲ್ಲಿ ಹುಟ್ಟಿದ ಸಿತಾರಾಗೆ ಸಂಗೀತ ಕಲಿಯಲು ಆರ್ಥಿಕ ಸಮಸ್ಯೆ ಎದುರಾಗಿತ್ತು. ಸಿತಾರಾ ಕನಸಿನ ಚಿಗುರನ್ನು ಅವರ ಸಮಾಜ ಚಿವುಟಿ ಹಾಕಿತ್ತಂತೆ. ಸಂಗೀತದ ಮೇಲಿನ ಒಲವಿನಿಂದಾಗಿ ಸಮಾಜವನ್ನು ಎದುರು ಹಾಕಿಕೊಂಡು ಸಿತಾರಾ ಹಾಡು ಹಾಡುತ್ತಿದ್ದಾರೆ. ಸಿತಾರಾಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ಅವರ ತಾಯಿ, ಸಹೋದರ ಕೂಡ ಸಮಾಜದ ವಿರೋಧ ಕಟ್ಟಿಕೊಳ್ಳಬೇಕಾಗಿದೆ.
‘ಇಂಡಿಯನ್ ಐಡಲ್’ನ ಆಡಿಶನ್ ರೌಂಡ್‌ನಲ್ಲಿ ಸಿತಾರಾ ಅವರ ಸಮಾಜಕ್ಕೆ ಗೊತ್ತಾಗದಂತೆ ಭಾಗಿಯಾಗಿದ್ದರು. ಇಷ್ಟುದಿನ ಗುಪ್ತವಾಗಿಯೇ ಸಿತಾರಾ ಸಂಗೀತ ಕಲಿತಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಝೈರಾ ವಾಸಿಮ್, ಸನಾ ಖಾನ್ ಅವರು ಧರ್ಮದ ಕಾರಣಕ್ಕಾಗಿಯೇ ಬಣ್ಣದ ಲೋಕ ತೊರೆದಿದ್ದರು. ಸಿತಾರಾ ಒಂದೇ ಅಲ್ಲದೆ ಇನ್ನೂ ಕೆಲವರು ಈ ಸಮಸ್ಯೆ ಎದುರಿಸಿದ್ದರು. ಕನ್ನಡದ ಸರಿಗಮಪ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ಸುಹಾನಾ ಸೈಯದ್ ಅವರಿಗೂ ಕೂಡ ಇದೇ ಸಮಸ್ಯೆ ಎದುರಾಗಿತ್ತು.
‘ಇಂಡಿಯನ್ ಐಡಲ್’ ರಿಯಾಲಿಟಿ ಶೋ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಸ್ತುತ ಇದರ 12ನೇ ಸೀಸನ್ ಪ್ರಸಾರವಾಗುತ್ತಿದೆ. ನೇಹಾ ಕಕ್ಕರ್, ಹಿಮೇಶ್, ವಿಶಾಲ್ ಈ ಶೋನ ಜಡ್ಜ್ ಆಗಿದ್ದಾರೆ. ಇನ್ನು ಈಗಾಗಲೇ ಇದು ಸಾಕಷ್ಟು ವಿವಾದಗಳಿಗೂ ಕಾರಣವಾಗಿದೆ. ಟಿಆರ್‌ಪಿಗಾಗಿ ಹೆಚ್ಚು ಬಡ ಪ್ರತಿಭೆಗಳನ್ನು ಇಲ್ಲಿ ಕರೆದುಕೊಂಡು ಬರಲಾಗುವುದು ಎಂಬ ಆರೋಪವಿದೆ.
Comments are closed.