ಕರಾವಳಿ

ಬಜಾಲ್ ವಾರ್ಡ್ ಹಾಗೂ ಕುಡುಪು ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Pinterest LinkedIn Tumblr

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಜಾಲ್ ವಾರ್ಡ್ ಹಾಗೂ ಕುಡುಪು ಅನಂತ ಪದ್ಮನಾಭ ಕ್ಷೇತ್ರದ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಜಾಲ್ ವಾರ್ಡಿನ ಆದರ್ಶ ನಗರ ಅಂಗನವಾಡಿಯ ಬಳಿ ಮುಖ್ಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.

ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಆದರ್ಶನಗರ ಅಂಗನವಾಡಿಯ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವ ಕುರಿತು ಸ್ಥಳೀಯ ಮುಖಂಡರು ನನ್ನ ಗಮನಕ್ಕೆ ತಂದಿದ್ದರು. ಆ ಸಂದರ್ಭದಲ್ಲಿ ಅಧಿಕಾರಿಗಳನ್ನು ಕಳುಹಿಸಿ ರಸ್ತೆ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದೆ. ಹಾಗೂ ಕಾಮಗಾರಿಗೆ ಬೇಕಾದ ಅನುದಾನ ಬಿಡುಗಡೆಗೊಳಿಸಿದ್ದೇನೆ. ಪ್ರಮುಖ ರಸ್ತೆಯಲ್ಲಿ ಕಾಮಗಾರಿ ನಡೆಯುವ ಕಾರಣ ಸಾರ್ವಜನಿಕರಿಗೆ ಅಲ್ಪಮಟ್ಟಿನ ಸಮಸ್ಯೆಯಾಗಬಹುದು. ಸಾರ್ವಜನಿಕರು ಪೂರಕವಾಗಿ ಸ್ಪಂದಿಸಿದರೆ ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬಹುದು ಎಂದರು.

ಸ್ಥಳೀಯ ಮನಪಾ‌ ಸದಸ್ಯರಾದ ಅಶ್ರಫ್, ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಚಂದ್ರಶೇಖರ ಜಯನಗರ, ಶಕ್ತಿಕೇಂದ್ರ ಪ್ರಭಾರಿಗಳಾದ ಶಿವಾಜಿ ರಾವ್, ಮುಖಂಡರಾದ ಯಶವಂತ್ ಶೆಟ್ಟಿ, ಸುರೇಶ್ ಶೆಟ್ಟಿ, ನರಸಿಂಹ ಪೈ, ಚೆನ್ನಪ್ಪ,ಚಂದ್ರಹಾಸ್ ಕುಲಾಲ್, ಮನೋಜ್, ಪಕ್ಷದ ಕಾರ್ಯಕರ್ತರು, ಸ್ಥಳೀಯರು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕುಡುಪು ಅನಂತ ಪದ್ಮನಾಭ ಕ್ಷೇತ್ರದ ಬಳಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಗುದ್ದಲಿಪೂಜೆ :

ಮಂಗಳೂರು ಮಹಾನಗರ ಪಾಲಿಕೆಯ ಪದವು ಪೂರ್ವ ವಾರ್ಡಿನ ಕುಡುಪು ಅನಂತ ಪದ್ಮನಾಭ ಕ್ಷೇತ್ರದ ಬಳಿ 7.50 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಗುದ್ದಲಿ ಪೂಜೆ ನೆರೆವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯ ಭಾಸ್ಕರ್ ಮೊಯ್ಲಿ, ಬಿಜೆಪಿ ಮುಖಂಡರಾದ ಅಜಯ್, ಸುಜನ್ ದಾಸ್, ಅನಿಲ್ ರಾವ್, ಮಂಜುಳಾ ರಾವ್, ಹರಿಣಿ ಪ್ರೇಮ್, ಲೋಕೇಶ್ ಚೌಕಿ, ಯೋಗೀಶ್ ಚೌಕಿ, ಸತೀಶ್ ಬೈತುರ್ಲಿ, ನಾಗೇಶ್ ಚೌಕಿ, ವಸಂತಿ ಆಚಾರ್ಯ , ಪ್ರಸನ್ನ ಆಚಾರ್ಯ, ದಿನೇಶ್ ಪಂಜಿರೆಲ್, ರಾಕೇಶ್ ಕುಡುಪು ಕಟ್ಟೆ, ರಾಜೇಂದ್ರ ಬೈತುರ್ಲಿ, ವಿನೋದ್ ಮಂಗಳ ನಗರ, ಇಂದುಮತಿ, ದಿನೇಶ್ ಸಿಲ್ವರ್ ಗೇಟ್, ದೇವದಾಸ್, ಸತೀಶ್ ಕುಡುಪು, ಭರತ್ ಮುಂತಾದವರು ಉಪಸ್ಥಿತರಿದ್ದರು.

Comments are closed.