
ಹೈದರಾಬಾದ್: ಕೇವಲ ಹಣ ಗಳಿಸುವ ಉದ್ದೇಶದಿಂದ ಪತ್ನಿಯೊಂದಿಗಿನ ಸೆ#ಕ್ಸ್ ಹಾಗು ಪತ್ನಿಯ ನ#ಗ್ನ ವೀಡಿಯೋಗಳನ್ನು ಪೋ#ರ್ನ್ ವೆಬ್ಸೈಟ್ ಗಳಲ್ಲಿ ಅಪ್ಲೋಡ್ ಮಾಡಿ ಹಣ ಗಳಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂದಿರುವ ಘಟನೆ ಗುಂಟೂರಿನಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆ ಯತಿ ಅಗ್ರಹಾರ ನಿವಾಸಿಯಾಗಿದ್ದು, ತನ್ನ ನ#ಗ್ನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋದು ಗಮನಕ್ಕೆ ಬಂದಿದೆ. ಕೂಡಲೇ ಮಹಿಳೆ ಪತ್ನಂ ಬಜಾರ ಏರಿಯಾದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪತಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧನ ಬಳಿಕ ಆರೋಪಿ ಪತ್ನಿಗೆ ತಿಳಿಯದಂತೆ ವೀಡಿಯೋ ಚಿತ್ರೀಕರಿಸಿ ಕೆಲ ವೆಬ್ಸೈಟ್ ಗಳಿಗೆ ಹಣ ಪಡೆಯುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಜೊತೆಗೆ ಹಲವು ಬಾರಿ ಪತ್ನಿ ಜೊತೆಗೆ ತಾನು ಕಳೆದ ಸಮಯವನ್ನು ಲೈವ್ ಸ್ಟ್ರೀಮಿಂಗ್ ಆ್ಯಪ್ ಮೂಲಕ ಲೈವ್ ಮಾಡಿರುವ ಆಘಾತಕಾರಿ ವಿಷಯ ಬಾಯಿ ಬಿಟ್ಟಿದ್ದಾನೆ.
ಆರೋಪಿ ಯಾವ ವೆಬ್ಸೈಟ್ ಗಳಿಗೆ ವೀಡಿಯೋ ಅಪ್ಲೋಡ್ ಮಾಡುತ್ತಿದ್ದ ಮತ್ತು ಆತನಿಗೆ ಹಣ ಯಾರಿಂದ ಪಾವತಿ ಆಗ್ತಿತ್ತು ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗ್ತಿದೆ. ಇನ್ನೂ ಆ್ಯಪ್ ನಲ್ಲಿ ಲೈವ್ ಮಾಡುವ ಮುನ್ನವೇ ಕೆಲವರಿಗೆ ಆರೋಪಿ ಮಾಹಿತಿ ನೀಡಿ ಮುಂಗಡ ಹಣ ಪಡೆಯುತ್ತಿರೋದರ ಬಗ್ಗೆ ತನಿಖೆ ವೇಳೆ ತಿಳಿದು ಬಂದಿದೆ.
ಮುಂಗಡವಾಗಿ ಹಣ ಪಾವತಿಸಿ ವೀಡಿಯೋ ವೀಕ್ಷಿಸಿದವರ ಮಾಹಿತಿಯನ್ನ ಕೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲರನ್ನು ವಿಚಾರಣೆಗೆ ಒಳಪಡಿಸಲಿದ್ದೇವೆ. ಈ ಸಂಬಂಧ ಸೈಬರ್ ಇಲಾಖೆಗೆ ಮಾಹಿತಿ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.
Comments are closed.