ಕರಾವಳಿ

ದ.ಕ.ಜಿಲ್ಲೆ : ಮತದಾರರ ಪಟ್ಟಿಗೆ ಹೆಸರು ಸೇರಿಸಲು ಡಿಸೆಂಬರ್ 17 ಕೊನೆ ದಿನ

Pinterest LinkedIn Tumblr

ಮಂಗಳೂರು ನವೆಂಬರ್ 20 : ನವೆಂಬರ್ 22, 29 ಹಾಗೂ ಡಿಸೆಂಬರ್ 6, ಮತ್ತು 13ರಂದು ಜಿಲ್ಲೆಯಾದ್ಯಂತ ಮಿಂಚಿನ ಮತದಾರರ ನೋಂದಾಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸಲು ಡಿಸೆಂಬರ್ 17 ಕೊನೆಯ ದಿನವಾಗಿದೆ.

ವಿಕಲಚೇತನರು, ಮಹಿಳೆಯರು, ದುರ್ಬಲರು ಮತ್ತು ಯುವ ಮತದಾರರ ಅನುಕೂಲಕ್ಕಾಗಿ ಮತದಾರರ ಮಿಂಚಿನ ನೋಂದಾಣಿ ಅಭಿಯಾನವು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಘಂಟೆಯವರೆಗೆ ನೋಂದಾಣಿ ಪ್ರಕ್ರಿಯೆಯು ನಡೆಯಲಿದೆ.

ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಣಿ ಆಗದೇ ಇರುವವರು ಈ ಪ್ರಕ್ರಿಯೆಯ ಸದುಪಯೋಗವನ್ನು ಪಡೆಯುವಂತೆ ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Comments are closed.